Thursday, June 4, 2026
Homeಕರಾವಳಿಬಂಟ್ವಾಳ: ಬಾಡಿಗೆ ಮನೆಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ ಪೋಲೀಸರ ದಾಳಿ, ಓರ್ವ ಅರೆಸ್ಟ್, ಮತ್ತೋರ್ವ ಎಸ್ಕೇಪ್

ಬಂಟ್ವಾಳ: ಬಾಡಿಗೆ ಮನೆಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ ಪೋಲೀಸರ ದಾಳಿ, ಓರ್ವ ಅರೆಸ್ಟ್, ಮತ್ತೋರ್ವ ಎಸ್ಕೇಪ್

- Advertisement -
- Advertisement -

ಬಂಟ್ವಾಳ: ಕಸ್ಬಾ ಗ್ರಾಮದ ಮಂಡಾಡಿ ಬಾಡಿಗೆ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪೋಲೀಸರು ಓರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಿರುತ್ತಾರೆ. ಬಂಧಿತನನ್ನು ಮೂಡನಡುಗೋಡು ಗ್ರಾಮದ ಮಜಲೋಡಿ ನಿವಾಸಿ ಸತೀಶ್ ಕುಮಾರ್ ಎಂದು ಗುರುತಿಸಲಾಗಿದೆ.

ಮತ್ತೋರ್ವ ಆರೋಪಿ ಸಜೀಪ ಕಾರಾಜೆ ನಿವಾಸಿ ಪ್ರದೀಪ್ ಕುಮಾರ್ ಎಂಬಾತ ಪರಾರಿಯಾಗಿದ್ದಾನೆ. ಆತನ ಬಂಧನಕ್ಕಾಗಿ ಇದೀಗ ಪೋಲೀಸರು ಬಲೆ ಬೀಸಿದ್ದಾರೆ.

ಸತೀಶ್ ಎಂಬಾತ ಮಂಡಾಡಿಯಲ್ಲಿ ಬಾಡಿಗೆ ಮನೆ ತಗೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಎನ್ನಲಾಗಿದೆ. ದಾಳಿ ಸಂದರ್ಭ ಮನೆಯಲ್ಲಿದ್ದ ಸುಮಾರು ಆರು ಸಾವಿರ ರೂ ನಗದು ಹಾಗೂ ಕೆಲವೊಂದು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

- Advertisement -

Latest News

error: Content is protected !!