Friday, June 5, 2026
Homeಕರಾವಳಿಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕಡಬದ ವಿದ್ಯಾರ್ಥಿ ಸಾವು

ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕಡಬದ ವಿದ್ಯಾರ್ಥಿ ಸಾವು

- Advertisement -
- Advertisement -

ಮಂಗಳೂರು : ನೇತ್ರಾವತಿ ಸೇತುವೆಯ ಮೇಲೆ ಎರಡು ಬೈಕ್‌ಗಳ ನಡುವೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಡಬ ನಿವಾಸಿ, ವಿದ್ಯಾರ್ಥಿ ಅಬ್ರಹಾಂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ನೇತ್ರಾವತಿ ಸೇತುವೆಯಲ್ಲಿ ಸೋಮವಾರ ರಾತ್ರಿ ಕಡಬ ತಾಲ್ಲೂಕಿನ ಮರ್ದಳ ಬಳಿಯ ಕೆಮ್ಮಾಯಿ ನಿವಾಸಿ ಸಾನು ಅಬ್ರಹಾಂ (21) ಅವರ ಬೈಕು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಅವರು ತೀವ್ರವಾಗಿ ಗಾಯಗೊಂಡಿದ್ದರು.

ಸಾನು ಅಬ್ರಹಾಂ ನಗರದ ಖಾಸಗಿ ಹೋಟೆಲ್ ಮ್ಯಾನೇಜ್ ಮೆಂಟ್‌ ಕಾಲೇಜಿನ ವಿದ್ಯಾರ್ಥಿಯಾಗಿದ್ದರು.ಸಾಲು ಅಬ್ರಾಹಂ ಅವರ ತಾಯಿ ಎರಡು ವರ್ಷಗಳ ಹಿಂದೆ ಮಿಂಚು ಹೊಡೆದು ಮೃತಪಟ್ಟಿದ್ದರು. ಮೃತ ಸಾನು ಅವರು ತಂದೆ ಮತ್ತು ಸಹೋದರನನ್ನು ಅಗಲಿದ್ದಾರೆ.

- Advertisement -

Latest News

error: Content is protected !!