Wednesday, June 3, 2026
Homeತಾಜಾ ಸುದ್ದಿಬೆಂಗಳೂರಿನಿಂದ ನಾಪತ್ತೆಯಾಗಿದ್ದ ಅಪ್ರಾಪ್ತೆ ಕಡಬದಲ್ಲಿ ಪ್ರಿಯಕರನೊಂದಿಗೆ ಪತ್ತೆ

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಅಪ್ರಾಪ್ತೆ ಕಡಬದಲ್ಲಿ ಪ್ರಿಯಕರನೊಂದಿಗೆ ಪತ್ತೆ

- Advertisement -
- Advertisement -

ಕಡಬ:  ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಅಪ್ರಾಪ್ತೆಯೊಬ್ಬಳು ಕಡಬದಲ್ಲಿ ಪತ್ತೆಯಾಗಿದ್ದಾಳೆ. ಕಡಬ ಠಾಣಾ ವ್ಯಾಪ್ತಿಯ ಕೊಂಬಾರು ಗ್ರಾಮದ ಕೆಂಜಾಳದಲ್ಲಿ ತನ್ನ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾಳೆ.

ಬೆಂಗಳೂರಿನ ಶ್ರೀರಾಂಪುರ ನಿವಾಸಿ ಪುಷ್ಪ (16) ಎಂಬಾಕೆಯನ್ನು  ಆಕೆಯ ಪ್ರಿಯಕರ ಬೆಂಗಳೂರಿನ ಅನಿರುದ್ಧ್ ಎಂಬಾತ ಅಪಹರಿಸಿರುವ ಬಗ್ಗೆ ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು‌. ಧರ್ಮಸ್ಥಳಕ್ಕೆ ಬಂದಿದ್ದ ಈ ಜೋಡಿ ಪಾದಯಾತ್ರೆಯ ಮೂಲಕ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳುತ್ತಿತ್ತು. ಈ  ವೇಳೆ ಕೊಂಬಾರು ಗ್ರಾಮದ ಕೆಂಜಾಳ ಎಂಬಲ್ಲಿ ಕಡಬ ಪೊಲೀಸರು ವಿಚಾರಣೆ ನಡೆಸಿ ಈ ಬಗ್ಗೆ ಬೆಂಗಳೂರು ಶ್ರೀರಾಂಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವರಿಗೆ ಮಾಹಿತಿ ನೀಡಿದ್ದರು.

ಅದರಂತೆ ಕಡಬಕ್ಕಾಗಮಿಸಿದ ಶ್ರೀರಾಂಪುರ ಪೊಲೀಸರು ಜೋಡಿಯನ್ನು ಬೆಂಗಳೂರಿಗೆ ಕರೆದೊಯ್ದಿದೆ ಎಂದು ಕಡಬ ಠಾಣಾ ಸಬ್ ಇನ್ಸ್ಪೆಕ್ಟರ್ ರುಕ್ಮನಾಯ್ಕ್ ತಿಳಿಸಿದ್ದಾರೆ.

- Advertisement -

Latest News

error: Content is protected !!