Thursday, June 4, 2026
Homeತಾಜಾ ಸುದ್ದಿವಧು ಸಿಕ್ತಿಲ್ಲ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ವ್ಯಕ್ತಿಗೆ ಕೊನೆಗೂ ಸಿಕ್ಕಳು ಹುಡುಗಿ

ವಧು ಸಿಕ್ತಿಲ್ಲ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ವ್ಯಕ್ತಿಗೆ ಕೊನೆಗೂ ಸಿಕ್ಕಳು ಹುಡುಗಿ

- Advertisement -
- Advertisement -

ಉತ್ತರಪ್ರದೇಶ: ತನಗೆ ಮದುವೆಯಾಗಲು ವಧು ಸಿಗ್ತಿಲ್ಲ ಎಂದು ಇತ್ತೀಚೆಗೆ 26 ವರ್ಷದ ಅಜೀಮ್ ಎಂಬ ವ್ಯಕ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ. 2 ಅಡಿ ಎತ್ತರದ ಆ ವ್ಯಕ್ತಿಗೆ ಕೊನೆಗೂ ಹುಡುಗಿ ಸಿಕ್ಕಿದ್ದಾಳೆ.

ಹೌದು..  ಅಜೀಮ್ ಅವರಿಗೆ ಅವರಷ್ಟೇ ಎತ್ತರದ ವಧುವೊಬ್ಬರು ಈಗ ಸಿಕ್ಕಿದ್ದಾರೆ. ವಧು ಸಿಕ್ಕ ಹಿನ್ನೆಲೆ ಅಜೀಮ್ ಖುಷಿಗೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಜೀಂ ಹುಡುಗಿ ಬೇಕು ಎಂದು ಕೇಳಿಕೊಳ್ಳುವ ವಿಡಿಯೋ ವೈರಲ್ ಆಗಿತ್ತು.  ಇದನ್ನ ನೋಡಿದ ಘಾಜಿಯಾಪುರ ಬಳಿ ಗ್ರಾಮವೊಂದರ ಜನರು ಅಲ್ಲಿ ರೆಹಾನಾ ಎಂಬು ಮಹಿಳೆಯ ಕುಟುಂಬದವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸದ್ಯ ಇಬ್ಬರ ಮನೆಯವರ ನಡುವೆ ಮದುವೆ ಮಾತುಕತೆ ನಡೆಯುತ್ತಿದ್ದು ವಧು-ವರರ ಮನೆಯವರು ಬಹುತೇಕ ಮದುವೆಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ರೆಹಾನಾಗೆ ಸಹ ಹಲವು ವರ್ಷಗಳಿಂದ ವರ ಸಿಕ್ಕಿರಲಿಲ್ಲ ಎನ್ನಲಾಗಿದೆ. ರೆಹಾನಾಗೆ 25 ವರ್ಷ ವಯಸ್ಸಾಗಿದ್ದು ಮನೆಗೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಅಜೀಮ್ ವ್ಯವಸಾಯ ಮಾಡುತ್ತಿದ್ದು ಅವರಿಗೆ ಬೇಕಿದ್ದ ಹೌಸ್​ವೈಫ್ ಸಿಕ್ಕಂತಾಗಿದೆ ಎಂದು ಪೊಲೀಸರು ಸಹ ಸಂತಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ವೈರಲ್ ವಿಡಿಯೋದಲ್ಲಿ ಅಜೀಮ್​ರನ್ನ ಕಂಡ ರೆಹಾನಾ ಅಜೀಂರನ್ನ ಒಪ್ಪಿದ್ದು ಎರಡೂ ಕುಟುಂಬಗಳ ನಡುವೆ ಕೊನೆಯ ಹಂತದ ಮಾತುಕತೆ ನಡೆದರೆ ಮದುವೆಗೆ ದಿನಾಂಕ ನಿಗದಿಯಾಗುವುದು ಪಕ್ಕಾ ಎನ್ನಲಾಗಿದೆ.

- Advertisement -

Latest News

error: Content is protected !!