Friday, June 5, 2026
Homeತಾಜಾ ಸುದ್ದಿ8ನೇ ತರಗತಿ ವಿದ್ಯಾರ್ಥಿಯೊಂದಿಗೆ, ಮೂರು ಮಕ್ಕಳ ತಾಯಿ ಪರಾರಿ

8ನೇ ತರಗತಿ ವಿದ್ಯಾರ್ಥಿಯೊಂದಿಗೆ, ಮೂರು ಮಕ್ಕಳ ತಾಯಿ ಪರಾರಿ

- Advertisement -
- Advertisement -

ಉತ್ತರ ಪ್ರದೇಶ : 8ನೇ ತರಗತಿ ವಿದ್ಯಾರ್ಥಿಯೊಂದಿಗೆ ಮೂರು ಮಕ್ಕಳ ತಾಯಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಕ್ಯಾಂಪಿಯರ್ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

29 ವರ್ಷದ, ಮಕ್ಕಳ ತಾಯಿ. 15 ವರ್ಷದ ಬಾಲಕನೊಂದಿದೆ ಪರಾರಿಯಾಗಿದ್ದಾಳೆ. ಇದರಿಂದಾಗಿ ಬಾಲಕನ ಕುಟುಂಬಸ್ಥರು ಕ್ಯಾಂಪಿಯರ್ ಗಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡು ಎಫ್ ಐ ಆರ್ ಕೂಡ ದಾಖಲಿಸಿದ್ದಾರೆ.

ಅಂದಹಾಗೇ, ಕುಟುಂಬದ ಮೂಲಕಗಳ ಪ್ರಕಾರ, ಮಹಿಳೆ ಮತ್ತು ಬಾಲಕ ಕಳೆದ ಒಂದು ವರ್ಷದಿಂದ ಸಂಬಂಧದಲ್ಲಿದ್ದರು ಎಂಬುದಾಗಿ ತಿಳಿದು ಬಂದಿದೆ. ಆದ್ರೇ.. ವಯಸ್ಸಿನ ನಡುವಿನ ಅಂತರ ಇದ್ದಿದ್ದರಿಂದಾಗಿ, ಕುಟುಂಬದ ಪೋಷಕರು ಯಾವುದೇ ಸಂಶಯವನ್ನು ವ್ಯಕ್ತವಾಗಿರಲಿಲ್ಲ. ಹೀಗಿದ್ದೂ ಮಹಿಳೆ ಮತ್ತು ಬಾಲಕ ಒಟ್ಟಿಗೆ ಹೆಚ್ಚು ಸಮಯ ಕಳೆಯುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ.

ಇದೀಗ ಐಪಿಸಿ ಸೆಕ್ಷನ್ 363 ( ಅಪಹಣಕ್ಕಾಗಿ ಶಿಕ್ಷೆ) ಮತ್ತು 365 (ವ್ಯಕ್ತಿಯನ್ನು ಮಿತಿಯಲ್ಲಿಟ್ಟುಕೊಳ್ಳುವ ಉದ್ದೇಶ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವಂತ ಕ್ಯಾಂಪಿಯರ್ ಗಂಜ್ ಠಾಣೆ ಪೊಲೀಸರು, ಮಹಿಳೆ ಮತ್ತು ಬಾಲಕನ ಪತ್ತೆಗಾಗಿ ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!