Wednesday, June 3, 2026
Homeಕರಾವಳಿಪುತ್ತೂರಿನ ಕ್ಯಾಂಪ್ಕೋದಲ್ಲಿ ಕೆಲಸ ಮಾಡುತ್ತಿದ್ದ ಯುವಕ ನೇಣಿಗೆ ಶರಣು

ಪುತ್ತೂರಿನ ಕ್ಯಾಂಪ್ಕೋದಲ್ಲಿ ಕೆಲಸ ಮಾಡುತ್ತಿದ್ದ ಯುವಕ ನೇಣಿಗೆ ಶರಣು

- Advertisement -
- Advertisement -

ಪುತ್ತೂರು: ಯುವಕನೊಬ್ಬ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ನೆಲ್ಲಿಕಟ್ಟೆ ಬ್ರಹ್ಮನಗರದಲ್ಲಿ ನಡೆದಿದೆ.
ನೆಲ್ಲಿಕಟ್ಟೆ ಬ್ರಹ್ಮನಗರ ಗುರುವಮ್ಮ ಎಂಬವರ ಪುತ್ರ ಪ್ರಕಾಶ್ ಎಂಬವರು ಆತ್ಮಹತ್ಯೆಗೆ ಶರಣಾದವರು.

ಪ್ರಕಾಶ್ ಅವರು ಕ್ಯಾಂಪ್ಕೋದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸಂಜೆ ಮನೆಗೆ ಬಂದವರು ಮನೆಯೊಳಗೆ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್ ಐ ಜಂಬೂರಾಜ್ ಮಹಾಜನ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮೃತರು ತಾಯಿ ಗುರುವಮ್ಮ ಮತ್ತು ಸಹೋದರನನ್ನು ಅಗಲಿದ್ದಾರೆ. ಈ ಬಗ್ಗೆ ಪುತ್ತೂರಿನ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

- Advertisement -

Latest News

error: Content is protected !!