Friday, June 5, 2026
Homeಕರಾವಳಿಬೆಳ್ತಂಗಡಿ: ಸರ್ಕಾರಿ ಬಸ್ ನಲ್ಲಿ ಅಪ್ರಾಪ್ತ ಹಿಂದೂ ಬಾಲಕಿಯ ಕೈಹಿಡಿದೆಳೆದ ಇರ್ಫಾನ್, ಪೋಕ್ಸೋ ಕಾಯ್ದೆಯಡಿ ಕೇಸು...

ಬೆಳ್ತಂಗಡಿ: ಸರ್ಕಾರಿ ಬಸ್ ನಲ್ಲಿ ಅಪ್ರಾಪ್ತ ಹಿಂದೂ ಬಾಲಕಿಯ ಕೈಹಿಡಿದೆಳೆದ ಇರ್ಫಾನ್, ಪೋಕ್ಸೋ ಕಾಯ್ದೆಯಡಿ ಕೇಸು ದಾಖಲು

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್‌ ಎಂಬಲ್ಲಿ ಯುವಕನೋರ್ವ ಅಪ್ರಾಪ್ತ ಯುವತಿಯೋರ್ವಳ ಜೊತೆ ಅನುಚಿತವಾಗಿ ನಡೆದುಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ.

ಈ‌ ಸಂಬಂಧ ದಿಡುಪೆ ಅಡ್ಕ ಮನೆಯ ಮುಹಮ್ಮದ್‌ ಇರ್ಫಾನ್ ಎಂಬಾತನನ್ನು ರಾಷ್ಟ್ರೀಯ ಹಿಂಜಾವೇ ಕಾರ್ಯಕರ್ತರು ಹಿಡಿದು ಧರ್ಮಸ್ಥಳ ಠಾಣೆಗೆ ಹಸ್ತಾಂತರಿಸಿದ್ದು, ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಮಿತ್ತಬಾಗಿಲು ಸರಕಾರಿ ಪ್ರೌಢಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದ ಅಪ್ರಾಪ್ತ ವಯಸ್ಸಿನ ಯುವತಿ ಧರ್ಮಸ್ಥಳ ಸಮೀಪದ ಪೂರ್ಜೆಬೈಲಿನಲ್ಲಿರುವ ತನ್ನ ಅಜ್ಜಿಮನೆಗೆ ಸರಕಾರಿ ಬಸ್ಸಿನಲ್ಲಿ ಸಂಜೆ 4 ಗಂಟೆ ತೆರಳುತ್ತಿದ್ದಳು. ಅದೇ ಬಸ್ಸಿನಲ್ಲಿ ಬಂದ ಕಾಮುಕ ಯುವಕ ಆಕೆಯ ಸಮೀಪ ಕುಳಿತುಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!