Friday, June 5, 2026
Homeಕರಾವಳಿವಿಚಾರಣೆ ವೇಳೆ ಪತಿಯ ಮೇಲೆ ಹಲ್ಲೆ ನಡೆಸಲು ಮುಂದಾದ ಪತ್ನಿ: ತಡೆಯಲು ಹೋದ ಪುತ್ತೂರು ಮಹಿಳಾ...

ವಿಚಾರಣೆ ವೇಳೆ ಪತಿಯ ಮೇಲೆ ಹಲ್ಲೆ ನಡೆಸಲು ಮುಂದಾದ ಪತ್ನಿ: ತಡೆಯಲು ಹೋದ ಪುತ್ತೂರು ಮಹಿಳಾ ಎಸ್ ಐ ಮೇಲೆ ಹಲ್ಲೆ, ಅಕ್ಕತಂಗಿಯರಿಬ್ಬರ ಬಂಧನ

- Advertisement -
- Advertisement -

ಪುತ್ತೂರು: ಪ್ರಕರಣವೊಂದರ ವಿಚಾರಣೆ ವೇಳೆ ಪತಿಗೆ ಹಲ್ಲೆ ನಡೆಸಲು ಮುಂದಾದ ಪತ್ನಿಯನ್ನು ತಡೆಯಲು ಹೋದ ಮಹಿಳಾ ಎಸ್ ಐ ಮೇಲೆ ಅಕ್ಕ ತಂಗಿಯರಿಬ್ಬರು ಹಲ್ಲೆ ನಡೆಸಿರುವ  ಘಟನೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಮಹಿಳಾ ಪೊಲೀಸ್ ಠಾಣೆಯ ಎಸ್.ಐ ಸೇಸಮ್ಮ ಅವರ ಮೇಲೆ ಸಾಲ್ಮರ ಮುದ್ದೋಡಿ ನಿವಾಸಿ ಲಾರೆನ್ಸ್ ಡಿ’ಸೋಜ ಅವರ ಪತ್ನಿ ಬೇಬಿ ಡಿಸೋಜ(34ವ) ಮತ್ತು ಹಾಸನ ಚೆನ್ನರಾಯಪಟ್ಟಣದ ನುಗ್ಗೆಹಳ್ಳಿ ನೆಟ್ಟಕೆರೆ ಗೋಪಾಲ ಎಂಬವರ ಪತ್ನಿ ಆಶಾ(35ವ) ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು ಇಬ್ಬರನ್ನೂ ಬಂಧಿಸಲಾಗಿದೆ.  

ಫೆ.28ರಂದು ಸುನಿತಾ ಡಿ’ಸೋಜಾ ಎಂಬವರು ಬೇಬಿ ಡಿಸೋಜಾ ಅವರ ವಿರುದ್ಧ ಮತ್ತು ಬೇಬಿ ಡಿಸೋಜಾ ಅವರು ಸುನಿತಾ ಡಿಸೋಜಾ ಅವರ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದರು. ಈ ದೂರಿನ ವಿಚಾರಣೆಗಾಗಿ ಅವರಿಬ್ಬರನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಈ ವೇಳೆ ಬೇಬಿ ಡಿಸೋಜ ಅವರ ಅಕ್ಕ, ಹಾಸನದಲ್ಲಿರುವ ಆಶಾ ಕೂಡಾ ಜೊತೆಗೆ ಬಂದಿದ್ದರು. ಎಸ್.ಐ ಸೇಸಮ್ಮ ಅವರು ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವೇಳೆ ಬೇಬಿ ಡಿಸೋಜಾರವರು ಪತಿ ಲಾರೆನ್ಸ್ ಡಿ’ಸೋಜಾ ಅವರಿಗೆ ಹಲ್ಲೆ ನಡೆಸಲು ಮುಂದಾಗಿದ್ದರು. ಇದನ್ನು ಗಮನಿಸಿದ ಎಸ್.ಐ ಸೇಸಮ್ಮ ಅವರನ್ನು ತಡೆಯಲು ಹೋಗಿದ್ದಾರೆ. ಈ ವೇಳೆ ಬೇಬಿ ಡಿಸೋಜ ಮತ್ತು ಆಕೆಯ ಅಕ್ಕ ಆಶಾ ಅವರು ಎಸ್.ಐ ಸೇಸಮ್ಮ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನು ಘಟನೆಯ ಬಳಿಕ ಎಸ್.ಐ ಸೇಸಮ್ಮ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಡಿಸ್ಜಾರ್ಜ್ ಆಗಿದ್ದಾರೆ. ಘಟನೆಯ ಕುರಿತು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಬೇಬಿ ಡಿಸೋಜ ಮತ್ತು ಆಶಾ ಸಹೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!