Wednesday, June 3, 2026
Homeತಾಜಾ ಸುದ್ದಿಮಡಿಕೇರಿಯಲ್ಲಿ ಮಲಗಿದ್ದ ಯುವಕನ ಮೇಲೆ ದಾಳಿ ನಡೆಸಿದ ಕಾಡಾನೆ:ಆನೆ ತುಳಿತಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ ಕಾರ್ಮಿಕ

ಮಡಿಕೇರಿಯಲ್ಲಿ ಮಲಗಿದ್ದ ಯುವಕನ ಮೇಲೆ ದಾಳಿ ನಡೆಸಿದ ಕಾಡಾನೆ:ಆನೆ ತುಳಿತಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ ಕಾರ್ಮಿಕ

- Advertisement -
- Advertisement -

ಕೊಡಗು: ಕಾಫಿ ಪಲ್ಪಿಂಗ್ ಕಣದಲ್ಲಿ ನಿದ್ದೆ ಮಾಡಿದ್ದ ಯುವಕನ ಮೇಲೆ ಕಾಡಾನೆ ದಾಳಿ ಮಾಡಿ ಯುವಕ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆ ಸಿದ್ದಾಪುರದಲ್ಲಿ ನಡೆದಿದೆ.

ಕಾಫಿ ಪಲ್ಪಿಂಗ್ ಕಣದಲ್ಲಿ ಮಲಗಿದ್ದ 22 ವರ್ಷದ ಯುವಕ ಸಂದೀಪ್ ನಿನ್ನೆ ರಾತ್ರಿ ಮಲಗಿದ್ದ ವೇಳೆ ಕಾಡಾನೆ ದಾಳಿ ಮಾಡಿ ಕೊಂದು ಹಾಕಿದೆ. ಇನ್ನು  ಮತ್ತೊಬ್ಬ ಕಾರ್ಮಿಕ ರಾಜು ಅದೃಷ್ಟವಶಾತ್ ಆನೆ ದಾಳಿಯಿಂದ ಪಾರಾಗಿದ್ದಾರೆ.

ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!