Thursday, June 4, 2026
Homeಕರಾವಳಿಮಂಗಳೂರಿನಲ್ಲಿ ಮತ್ತೆ ಮರುಕಳಿಸಿತು ಅಂತಹದ್ದೇ ಹೀನ ಕೃತ್ಯ:ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಅವಹೇಳನಕಾರಿ ಬರಹ, ಕಾಂಡೋಮ್...

ಮಂಗಳೂರಿನಲ್ಲಿ ಮತ್ತೆ ಮರುಕಳಿಸಿತು ಅಂತಹದ್ದೇ ಹೀನ ಕೃತ್ಯ:ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಅವಹೇಳನಕಾರಿ ಬರಹ, ಕಾಂಡೋಮ್ ಪತ್ತೆ

- Advertisement -
- Advertisement -

ಮಂಗಳೂರು: ಕಳೆದ ತಿಂಗಳು ಉಳ್ಳಾಲ ನಗರಸಭಾ ವ್ಯಾಪ್ತಿಯ ಪ್ಯಾರಿಸ್ ಜಂಕ್ಷನ್​ನಲ್ಲಿರುವ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಅವಹೇಳನಕಾರಿ ಬರಹ ಹಾಗೂ ಕಾಂಡೋಮ್ ಪತ್ತೆಯಾಗಿ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೆ ಅಂತಹದ್ದೇ ಶಾಂತಿ ಕದಡುವಂತಹ ಘಟನೆ ಮರುಕಳಿಸಿದೆ.

ಹೌದು.. ದಡ್ಡಲ್ ಕಾಡ್ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಅವಹೇಳನಕಾರಿ ಬರಹ, ಕಾಂಡೋಮ್ ಪತ್ತೆಯಾಗಿವೆ. ಸ್ಥಳಕ್ಕೆ ಭಕ್ತರು ಜಮಾಯಿಸಿದ್ದು, ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆಯೂ ಮೂರು ಕಡೆಗಳಲ್ಲಿ ಕಾಣಿಕೆ ಡಬ್ಬಿಯಲ್ಲಿ ಅವಹೇಳನಕಾರಿ ಬರಹ ಹಾಕಲಾಗಿತ್ತು.

ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗುವುದು. ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳುವುದಾಗಿ ನಗರ‌ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ‌.

- Advertisement -

Latest News

error: Content is protected !!