Wednesday, May 8, 2024
Homeಕರಾವಳಿಸುಳ್ಯ: ಬಾಣಂತಿ-ಹಸುಗೂಸನ್ನು ನಡುರಸ್ತೆಯಲ್ಲೇ ಇಳಿಸಿದ ಆಂಬ್ಯುಲೆನ್ಸ್ ಚಾಲಕ

ಸುಳ್ಯ: ಬಾಣಂತಿ-ಹಸುಗೂಸನ್ನು ನಡುರಸ್ತೆಯಲ್ಲೇ ಇಳಿಸಿದ ಆಂಬ್ಯುಲೆನ್ಸ್ ಚಾಲಕ

spot_img
- Advertisement -
- Advertisement -

ಸುಳ್ಯ: ತುರ್ತು ಪರಿಸ್ಥಿತಿಯ ವೇಳೆ ಆಂಬ್ಯುಲೆನ್ಸ್​ ಚಾಲಕ ಬಾಣಂತಿಯೊಬ್ಬರನ್ನು ನಡುರಸ್ತೆಯಲ್ಲಿಯೇ ಇಳಿಸಿ ತೆರಳಿದ ಅಮಾನವೀಯ ಘಟನೆ ಸುಳ್ಯದಲ್ಲಿ ನಡೆದಿದೆ.
ಇಲ್ಲಿನ ಕೊಲ್ಲಮೊಗ್ರ ಗ್ರಾಮದ ಕಟ್ಟದ ನಿವಾಸಿ ಬಾಣಂತಿಯೋರ್ವರನ್ನು ನವಜಾತ ಮಗುವಿನೊಂದಿಗೆ ಮನೆಗೆ ತಲುಪಿಸದೇ ಅಂಬ್ಯುಲೆನ್ಸ್ ಚಾಲಕ ಗುತ್ತಿಗಾರಿನ ಪೇಟೆಯಲ್ಲಿ ಇಳಿಸಿ ಹೋಗಿದ್ದಾನೆ. ಕೊಲ್ಲಮೊಗ್ರು ಗ್ರಾಮದ ಕಟ್ಟದ ನಿವಾಸಿ ನವೀನ್ ಪತ್ನಿ ಬಾಣಂತಿ ಶಾರದಾ ಅವರನ್ನು ಇತ್ತೀಚೆಗೆ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಸೇರಿಸಲಾಗಿತ್ತು.
ಹೆರಿಗೆಯ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ನಂತರ ಅಲ್ಲಿನ ಅಂಬ್ಯುಲೆನ್ಸ್ ಮೂಲಕ ಕಟ್ಟದ ಮನೆಗೆ ಕಳುಹಿಸಿಕೊಡಲಾಗಿತ್ತು.ಆದರೆ ಅಂಬುಲೆನ್ಸ್ ಚಾಲಕ ಬಾಣಂತಿಯನ್ನು ನವಜಾತ ಪುಟ್ಟ ಮಗುವಿನೊಂದಿಗೆ ಗುತ್ತಿಗಾರಿನ ಬಸ್ ನಿಲ್ದಾಣದ ಬಳಿ ಇಳಿಸಿ ತೆರಳಿದ್ದಾನೆ ಎನ್ನಲಾಗಿದೆ.
ಬಳಿಕ ಪೋಲೀಸರು ಗುತ್ತಿಗಾರು ಪಂಚಾಯತ್ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದು, ಗುತ್ತಿಗಾರಿನ ಗ್ರಾ.ಪಂ ಅಧ್ಯಕ್ಷರು, ಸ್ಥಳೀಯ ಪೋಲಿಸರು ಸೇರಿ ಬಾಣಂತಿ ಹಾಗೂ ಮಗುವನ್ನು ಅವರ ಮನೆಗೆ ಅಟೋದಲ್ಲಿ ಕಳುಹಿಸಿದ್ದಾರೆ. ಆಂಬ್ಯುಲೆನ್ಸ್ ಚಾಲಕನ ಈ ನಡೆಗೆ ಸಾರ್ವಜನಿಕರಿಂದ ಆಕ್ರೋಶ ಕೇಳಿ ಬಂದಿದೆ.

- Advertisement -
spot_img

Latest News

error: Content is protected !!