Saturday, June 6, 2026
Homeತಾಜಾ ಸುದ್ದಿಅತ್ತೆಯನ್ನೇ ಹೊಡೆದು ಸಾಯಿಸಿದ ಸೊಸೆ

ಅತ್ತೆಯನ್ನೇ ಹೊಡೆದು ಸಾಯಿಸಿದ ಸೊಸೆ

- Advertisement -
- Advertisement -

ಮುಂಬೈ : ವಿಧವೆ ಸೊಸೆಯೊಬ್ಬಳು ತನ್ನ ಅತ್ತೆಯನ್ನು ಹೊಡೆದು ಸಾಯಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.


ಮಹಿಳೆಯ ಪತಿ 2 ವರ್ಷದ ಹಿಂದೆ ನಿಧನರಾಗಿದ್ದರು. ಮಹಿಳೆಗೆ ಅತ್ತೆಯ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಇದರಿಂದ ಕೋಪಗೊಂಡ ಮಹಿಳೆ ಕಬ್ಬಿಣದ ರಾಡ್ ನಿಂದ ಅತ್ತೆಯ ಮೇಲೆ ಹಲ್ಲೆ ನಡೆಸಿದ್ದಾಳೆ. ಇದರ ಪರಿಣಾಮ ಅತ್ತೆ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. 

ಇದಾದ ಬಳಿಕ ಮಹಿಳೆ ಟಾಯ್ಲೆಟ್ ಕ್ಲೀನರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಹಿಳೆಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!