Friday, June 5, 2026
Homeಕರಾವಳಿಪಡುಮಾರ್ನಾಡು ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮ ಸಭೆ

ಪಡುಮಾರ್ನಾಡು ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮ ಸಭೆ

- Advertisement -
- Advertisement -

ಮೂಡುಬಿದಿರೆ: ಇಲ್ಲಿನ ಪಡುಮಾರ್ನಾಡು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮಕ್ಕಳ ಗ್ರಾಮ ಸಭೆ ನಡೆಯಿತು ಅಧ್ಯಕ್ಷತೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡುಮಾರ್ನಾಡು ಇಲ್ಲಿನ ವಿದ್ಯಾರ್ಥಿನಿ ಸ್ವಾತಿ ವಹಿಸಿದ್ದರು.

ಗ್ರಾಮಪಂಚಾಯತಿಯ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ತಮ್ಮ ಶಾಲೆ ಮತ್ತು ಗ್ರಾಮಕ್ಕೆ ತಮಗೆ ಬೇಕಾದ ಅಗತ್ಯಗಳನ್ನು ಕೇಳಿಕೊಂಡರು. ಈ ಸಭೆಯಲ್ಲಿ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಶ್ರೀಮತಿ ರಾಜಶ್ರೀ ಬಿ, ಅಭಿವೃದ್ಧಿ ಅಧಿಕಾರಿ ಶ್ರೀರಮೇಶ್ ರಾಥೋಡ್ ಮಹಿಳಾ ಮತ್ತುಮಕ್ಕಳ ಕಲ್ಯಾಣ ಇಲಾಖೆಯ ಶ್ರೀಮತಿ ರತಿ ಶೆಟ್ಟಿ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ ಪ್ರಸನ್ನ ಶೆಣೈ ಆರೋಗ್ಯ ಇಲಾಖೆಯ ಶ್ರೀಮತಿ ಗೀತಾ ಮುಖ್ಯೋಪಾಧ್ಯಾಯ ಶ್ರೀ ವಾಸುದೇವ ಆಚಾರ್ಯ ಮತ್ತಿತರರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಓದುವ ಬೆಳಕು ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು ಎಲ್ಲಾ ವಿದ್ಯಾರ್ಥಿಗಳಿಗೂ ಗ್ರಂಥಾಲಯದ ಉಚಿತ ನೊಂದಾವಣೆ ಮಾಡಿ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸಲಾಯಿತು.

- Advertisement -

Latest News

error: Content is protected !!