Wednesday, June 3, 2026
Homeಕರಾವಳಿಧರ್ಮಸ್ಥಳ ಕ್ಷೇತ್ರಕ್ಕೆ ಇನ್ನು ಭೇಟಿ ನೀಡುವಾಗ ಮುಂಬಯಿಯಿಂದ ಬಂದಿರೋ ಈ ಬಸ್ ನ ನೋಡೋದು ಮರೀಬೇಡಿ..

ಧರ್ಮಸ್ಥಳ ಕ್ಷೇತ್ರಕ್ಕೆ ಇನ್ನು ಭೇಟಿ ನೀಡುವಾಗ ಮುಂಬಯಿಯಿಂದ ಬಂದಿರೋ ಈ ಬಸ್ ನ ನೋಡೋದು ಮರೀಬೇಡಿ..

- Advertisement -
- Advertisement -

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆಯಲು ದೂರದ ಊರಿನಿಂದಲೂ ಸಾಕಷ್ಟು ಭಕ್ತರು ಆಗಮಿಸುತ್ತಾರೆ. ಅದರೊಂದಿಗೆ ಶ್ರೀ ಸಾನಿಧ್ಯಕ್ಕೆ ಬರುವ ಯಾತ್ರಾರ್ಥಿಗಳು ಧರ್ಮಸ್ಥಳದಲ್ಲಿ ಮಂಜುಷಾ ಕಾರ್ ಮ್ಯೂಸಿಯಂಗೆ ಮಿಸ್ ಮಾಡದೆ ಭೇಟಿ ನೀಡುತ್ತಾರೆ. ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಒಡೆತನದ ವಿಂಟೇಜ್ ಕಾರ್ ಮ್ಯೂಸಿಯಂಗೆ ಪ್ರತಿ ಬಾರಿ ಭೇಟಿ ನೀಡಿದಾಗಲೂ ಹೊಸದಾಗಿ ಬಂದಿರುವ ಸಾಕಷ್ಟು ಹಳೆಯ ವಿವಿಧ ಕಾರುಗಳನ್ನು ನೋಡಬಹುದು. ಕಾರು ಮಾತ್ರವಲ್ಲದೆ ವಿಮಾನವನ್ನು ಹೊಂದಿರುವ ವಸ್ತುಸಂಗ್ರಹಾಲಯಕ್ಕೆ ಹೊಸದಾಗಿ ಹಳೆ ಕಾಲದ ಬಸ್ ಒಂದು ಸೇರಿದೆ.

ಹೌದು, ಮಹಾನಗರಿ ಮುಂಬೈಯಲ್ಲಿ ಲಕ್ಷಾಂತರ ಜನರನ್ನು ಹೊತ್ತೊಯ್ದಿದ್ದ ಹಳೆಯ ಕಾಲದ ಡಬ್ಬಲ್ ಡೆಕ್ಕರ್ ಬಸ್ ಶ್ರೀ ಕ್ಷೇತ್ರ ಧರ್ಮಸ್ಥಳ ಮೂಸಿಯಂಗೆ ಕ್ರೇನ್ ಮೂಲಕ ಆಗಮಿಸಿದೆ. ಮುಂಬಯಲ್ಲಿ ಬಿಡ್ ಮೂಲಕ ಧರ್ಮಸ್ಥಳದ ಆಡಳಿತ ಮಂಡಳಿ ಪಡೆಯಲಾಗಿದ್ದು ಎಂದು ಧರ್ಮಸ್ಥಳದ ಕ್ಷೇತ್ರದ ಮೂಲಗಳು ಮಹಾ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

- Advertisement -

Latest News

error: Content is protected !!