Thursday, June 4, 2026
Homeಕರಾವಳಿಬೆಳ್ತಂಗಡಿ: ಕಾಜೂರು ಉರೂಸ್ ಅಂಗಡಿ ಏಲಂ ಸ್ಥಳದ ವಿಚಾರ, ಹಲ್ಲೆ ನಡೆಸಿದ ಆರೋಪಿಗಳಿಗೆ ಜಾಮೀನು

ಬೆಳ್ತಂಗಡಿ: ಕಾಜೂರು ಉರೂಸ್ ಅಂಗಡಿ ಏಲಂ ಸ್ಥಳದ ವಿಚಾರ, ಹಲ್ಲೆ ನಡೆಸಿದ ಆರೋಪಿಗಳಿಗೆ ಜಾಮೀನು

- Advertisement -
- Advertisement -

ಬೆಳ್ತಂಗಡಿ: ಕಾಜೂರು ಉರೂಸಿನ ಅಂಗಡಿ ಏಲಂ ಸ್ಥಳದ ವಿಚಾರವಾಗಿ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ.

ಮಿತ್ತಬಾಗಿಲು ಗ್ರಾಮದ ಜಕಾರಿಯ, ಪಾರೂಕ್‌, ಸಂಶುದ್ದೀನ್‌ ಎಂಬವರು ಜೀವಬೆದರಿಕೆಯೊಡ್ಡಿ ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದು ಆರೋಪಿಗಳ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾಜೂರು ಉರೂಸ್‌ ಗೆ ಸಂಭಂಧಿಸಿದ ಅಂಗಡಿ ಏಲಂ ಸ್ಥಳದ ವಿಚಾರದಲ್ಲಿ ಅಂಗಡಿಗಳಿಗೆ ಸ್ಥಳ ನೀಡಬಾರದು ಎಂದು ತಕರಾರು ತೆಗೆದು ಕಲ್ಲಿನಿಂದ ಹಲ್ಲೆ ನಡೆಸಿದ್ದು ಜೀವಬೆದರಿಕೆ ಒಡ್ಡಲಾಗಿತ್ತು, ಆರೋಪಿಗಳ ವಿರುದ್ದ ಫಾರೂಕ್ ಎಂಬವರು ದೂರು ನೀಡಿದ್ದರು. ಆರೋಪಿಗಳ ಪರ ಜುಬೇದ ಸರಳಿಕಟ್ಟೆ ಮತ್ತು ಅಸ್ಮ ಬೆಳ್ತಂಗಡಿ ವಾದಿಸಿದ್ದರು‌.

- Advertisement -

Latest News

error: Content is protected !!