Friday, July 10, 2026
Homeತಾಜಾ ಸುದ್ದಿಬೆಂಗಳೂರು ಹಿಟ್ ಆಂಡ್ ರನ್​ ಕೇಸ್: ಸರಣಿ ಅಪಘಾತ ಮಾಡಿದ್ದು ನಟಿ ಶಿಲ್ಪಾ ಶೆಟ್ಟಿಯ ಕಾರು.!

ಬೆಂಗಳೂರು ಹಿಟ್ ಆಂಡ್ ರನ್​ ಕೇಸ್: ಸರಣಿ ಅಪಘಾತ ಮಾಡಿದ್ದು ನಟಿ ಶಿಲ್ಪಾ ಶೆಟ್ಟಿಯ ಕಾರು.!

- Advertisement -
- Advertisement -

ಬೆಂಗಳೂರು: ನಗರದ ಕಬ್ಬನ್ ಪಾರ್ಕ್ ಬಳಿ ನಡೆದಿದ್ದ ಸರಣಿ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಅಪಘಾತ ಮಾಡಿರುವ ಕಾರು ಬಾಲಿವುಡ್ ನಟಿ ಶಿಲ್ಪಾ ಶಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರಿಗೆ ಸೇರಿದ್ದು ಎಂಬ ವಿಷಯ ಈಗ ಬಹಿರಂಗವಾಗಿದೆ.

ಕಬ್ಬನ್ ಪಾರ್ಕ್ ಬಳಿ AUDI R8 ಹೆಸರಿನ ಐಶಾರಾಮಿ ಕಾರು ಫೆ. 7ರ ಮಧ್ಯಾಹ್ನದಂದು ಆಟೋ, ದ್ವಿಚಕ್ರ ವಾಹನಕ್ಕೆ ಸರಣಿ ಅಪಘಾತ ಮಾಡಿ ಪರಾರಿಯಾಗಿತ್ತು. ಈ ಕುರಿತು ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪಘಾತವೆಸಗಿದ್ದ ಕಾರಿನ ಬಗ್ಗೆ ಆರ್.ಟಿ.ಒ. ಮೂಲಕ ಪರಿಶೀಲಿಸಿದಾಗ ಕಾರು ರಾಜ್ ಕುಂದ್ರಾ ಹೆಸರಲ್ಲಿರುವುದು ಪತ್ತೆಯಾಗಿದೆ.

ಎರಡು ತಿಂಗಳ ಹಿಂದೆಯೇ ಮುಂಬೈ ಕಾರು ಡೀಲರ್​ ಮೂಲಕ ಬೆಂಗಳೂರು ಮೂಲದ ಕಾರು ಡೀಲರ್​ಗೆ ರಾಜ್​ ಕುಂದ್ರಾ ಕಾರು ಮಾರಾಟ ಮಾಡಿದ್ದರು. ಆದರೆ, ಇನ್ನೂ ಹೊಸ ಖರೀದಿದಾರನ ಹೆಸರಿಗೆ ದಾಖಲೆಗಳು ವರ್ಗಾವಣೆಯಾಗಿಲ್ಲ. ಹೀಗಾಗಿ, ಮಾರಾಟವಾಗಿ ಎರಡು ತಿಂಗಳು ಆದರೂ ಕಾರಿನ ದಾಖಲೆಗಳು ಇನ್ನು ರಾಜ್ ಕುಂದ್ರಾ ಹೆಸರಿನಲ್ಲಿ ಇರುವುದು ಪತ್ತೆಯಾಗಿದೆ. ಸಿಸಿ ಕ್ಯಾಮರಾಗಳ ದೃಶ್ಯಾವಳಿ ಆಧರಿಸಿ ಐಶಾರಾಮಿ ಕಾರು ಮತ್ತು ಚಾಲಕ ಮಹಮ್ಮದ್​ನನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ. ಬಿಟಿಎಂ 2ನೇ ಹಂತದ ನಿವಾಸಿ ಮಹಮ್ಮದ್​ ವಿರುದ್ಧ ಈ ಮೊದಲೇ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!