Friday, June 5, 2026
Homeಕರಾವಳಿಕಡಬ: 108 ಆ್ಯಂಬುಲೆನ್ಸ್​​ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಕಡಬ: 108 ಆ್ಯಂಬುಲೆನ್ಸ್​​ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

- Advertisement -
- Advertisement -

ಕಡಬ: ಹೆರಿಗಾಗಿ 108 ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರದೊಯ್ಯುವ ಮಾರ್ಗ ಮಧ್ಯೆಯೇ ಮಹಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಕಡಬದ ಕುಟ್ರುಪ್ಪಾಡಿ ಗ್ರಾಮದ ಅಲಾರ್ಮೆ ನಿವಾಸಿ ಲಲಿತಾ ಎಂಬವರಿಗೆ ಇಂದು ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು.

ಹೆರಿಗೆ ಅವಧಿಗಿಂತ ಮೊದಲೇ ನೋವು ಕಾಣಿಸಿಕೊಂಡಿದ್ದರಿಂದ ಲಲಿತಾರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲು ವೈದ್ಯಾಧಿಕಾರಿ ಸೂಚಿಸಿದ್ದರು. ಅದರಂತೆ ಕಡಬದ 108 ಆಯಂಬುಲೆನ್ಸ್ ನಲ್ಲಿ ಪುತ್ತೂರಿಗೆ ಕರೆದೊಯ್ಯುವ ವೇಳೆ ಆಲಂಕಾರು ಸಮೀಪದ ಶಾಂತಿಮೊಗರು ಎಂಬಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಸಂದರ್ಭದಲ್ಲಿ ಇಎಂಟಿ ನವ್ಯಾ ಹಾಗೂ ಪೈಲಟ್ ರಾಜೇಶ್ ಸಹಜ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯದಿಂದಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!