Thursday, June 4, 2026
Homeತಾಜಾ ಸುದ್ದಿಉತ್ತರಾಖಂಡನಲ್ಲಿ ಮುಂದುವರೆದ ರಕ್ಷಣಾ ಕಾರ್ಯಾಚರಣೆ: ಗುಹೆಯೊಳಗೆ ಸಿಲುಕಿದಾತನ ರಕ್ಷಿಸುವ ವಿಡಿಯೋ ವೈರಲ್

ಉತ್ತರಾಖಂಡನಲ್ಲಿ ಮುಂದುವರೆದ ರಕ್ಷಣಾ ಕಾರ್ಯಾಚರಣೆ: ಗುಹೆಯೊಳಗೆ ಸಿಲುಕಿದಾತನ ರಕ್ಷಿಸುವ ವಿಡಿಯೋ ವೈರಲ್

- Advertisement -
- Advertisement -

ಉತ್ತರಾಖಂಡ: ಹಿಮಸ್ಫೋಟ ಸಂಭವಿಸಿದ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಐಟಿಬಿಪಿ ಸೇರಿದಂತೆ ವಿವಿಧ ಸೇನಾ ತುಕಡಿಗಳು ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆ ರೋಮಾಂಚಕಾರಿಯಾಗಿದೆ.

ಉತ್ತರ ಖಂಡ್ ರಾಜ್ಯದ ದೌಲಿಗಂಗಾ ಬಳಿಯ ತಪೋವನ ಬಳಿ ಸುರಂಗದಲ್ಲಿ ಸಿಲುಕಿದ್ದ 12 ಜನರನ್ನು ಹೀಮವೀರರು ಎಂದೇ ಖ್ಯಾತರಾದ ಐಟಿಬಿಪಿ ಸಿಬ್ಬಂದಿ ರಕ್ಷಿಸಿದ್ದಾರೆ.ಏಳೆಂಟು ಐಟಿ ಬಿಪಿ ಸಿಬ್ಬಂದಿ ಸತತ ಕಾರ್ಯಾಚರಣೆ ಬಳಿಕ ಸುರಂಗದೊಳಗೆ ಸಿಲುಕಿದ್ದ 12 ಜನರನ್ನು ರಕ್ಷಿಸಿದ್ದಾರೆ. ಈ ಪೈಕಿ ಮೂವರು ಅರೆಪ್ರಜ್ಞಾವಸ್ಥೆಯಲ್ಲಿದ್ದರು.

ನಂತರ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಸ್ಟ್ರೆಚರ್‌ ಮೂಲಕ ಅವರನ್ನು ರಸ್ತೆಗೆ ಬಿಡಲಾಯಿತು. ಸುರಂಗದಿಂದ ಹೊರಗೆ ಬಂದ ವ್ಯಕ್ತಿಯೊಬ್ಬನ ಆನಂದಕ್ಕೆ ಪಾರವೇ ಇಲ್ಲದಂತಾಗಿತ್ತು. ಹೀಗೆ ಸಂತೋಷಪಡುತ್ತಲ್ಲೇ ನಿತ್ರಾಣದಿಂದ ಕೆಳಗೆ ಬಿದ್ದ ಆ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು.

- Advertisement -

Latest News

error: Content is protected !!