Friday, June 5, 2026
Homeಕರಾವಳಿಉಡುಪಿಉಡುಪಿಯ ನಿಟ್ಟೂರು ರಾಷ್ಟ್ರೀಯ ಹೆದ್ದಾರಿ ಬಳಿ ಅಪರಿಚಿತ ಯವಕನ ಶವ ಪತ್ತೆ

ಉಡುಪಿಯ ನಿಟ್ಟೂರು ರಾಷ್ಟ್ರೀಯ ಹೆದ್ದಾರಿ ಬಳಿ ಅಪರಿಚಿತ ಯವಕನ ಶವ ಪತ್ತೆ

- Advertisement -
- Advertisement -

ಉಡುಪಿ: ಇಲ್ಲಿನ ನಿಟ್ಟೂರು ರಾಷ್ಟ್ರೀಯ ಹೆದ್ದಾರಿಯ ವಿಭಾಜಕದಲ್ಲಿ ಅಪರಿಚಿತ ಯುವಕನೊರ್ವ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿರುವುದನ್ನು ಸುನಿಲ್ ಎಂಬುವರು ಗಮನಿಸಿದ್ದು, ತಕ್ಷಣ ಅವರು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರಿಗೆ ಮಾಹಿತಿ ನೀಡಿದ್ದಾರೆ.

ಸಮಾಜಸೇವಕರು ಯುವಕನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಯುವಕ ಮೃತಪಟ್ಟಿರುವುದು ಧೃಡಪಟ್ಟಿದೆ. ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದ ಶೀತಲಿಕರಣ ಘಟಕದಲ್ಲಿ ರಕ್ಷಿಸಿ ಇಡಲಾಗಿದೆ.


ಮೃತ ಯುವಕನಿಗೆ ಸುಮಾರು 28 ವರ್ಷ ವಯಸ್ಸಾಗಿದ್ದು, ಕಾರ್ಕಳದ ರಂಗನಪಲ್ಕೆಯ ನಿವಾಸಿ ಎಂದು ಶಂಕಿಸಲಾಗಿದೆ. ಇವರ ಪರಿಚಯದವರು ತಕ್ಷಣ ಉಡುಪಿ ನಗರ ಪೊಲೀಸ್ ಠಾಣೆಯ ನಾಗರಿಕ ಸಹಾಯ ಕೆಂದ್ರವನ್ನು ಸಂಪರ್ಕಿಸುವಂತೆ ಸಮಾಜಸೇವಕರು ಸೂಚಿಸಿದ್ದಾರೆ.

- Advertisement -

Latest News

error: Content is protected !!