Thursday, June 4, 2026
Homeಕರಾವಳಿಕಂಬಳದಲ್ಲಿ ಮತ್ತೊಂದು ದಾಖಲೆ: 'ಉಸೇನ್ ಬೋಲ್ಟ್' ಖ್ಯಾತಿಯ ಶ್ರೀನಿವಾಸ್ ದಾಖಲೆ ಮುರಿದ 'ವಿಶ್ವನಾಥ್'

ಕಂಬಳದಲ್ಲಿ ಮತ್ತೊಂದು ದಾಖಲೆ: ‘ಉಸೇನ್ ಬೋಲ್ಟ್’ ಖ್ಯಾತಿಯ ಶ್ರೀನಿವಾಸ್ ದಾಖಲೆ ಮುರಿದ ‘ವಿಶ್ವನಾಥ್’

- Advertisement -
- Advertisement -

ಮಂಗಳೂರು: ಕಿನ್ನಿಗೋಳಿ ಸಮೀಪದ ಐಕಳ ಕಂಬಳ ಇಂದು ಮತ್ತೊಂದು ದಾಖಲೆ ಬರೆದಿದೆ. 9.55 ಸೆಕೆಂಡ್ ನಲ್ಲಿ 100 ಮೀಟರ್ ಕಂಬಳ ಕ್ರೀಡೆಯಲ್ಲಿ ಓಡಿ, ಕಂಬಳದ ಉಸೇನ್ ಬೋಲ್ಟ್ ಎಂಬುದಾಗಿ ಪ್ರಖ್ಯಾತವಾಗಿದ್ದ ಶ್ರೀನಿವಾಸ್ ಗೌಡ ದಾಖಲೆಯನ್ನು ಮತ್ತೊಬ್ಬ ಕಂಬಳ ವೀರ ಮುರಿದಿದ್ದಾನೆ.

ಮಂಗಳೂರಿನ ಕಿನ್ನಿಗೋಳಿ ಸಮೀಪದ ಐಕಳದಲ್ಲಿ ನಡೆದ ಕಾಂತಂಬಾರೆ-ಬೂದಾಬಾರೆ ಕಂಬಳದ ಚಾನ್ಸ್‌ ಓಟದಲ್ಲಿ ಬೈಂದೂರಿನ ವಿಶ್ವನಾಥ್ ಓಡಿಸಿದ ಕೋಣಗಳು 9.15 ಸೆಕೆಂಡ್ಗಳಲ್ಲಿ 100 ಮೀಟರ್ ತಲುಪುವ ಮೂಲಕ ದಾಖಲೆ ಬರೆದಿದ್ದಾರೆ. ಶ್ರೀನಿವಾಸಗೌಡ ಅವರು ಕಳೆದ ವರ್ಷ ನೇಗಿಲ ಹಿರಿಯ ವಿಭಾಗದಲ್ಲಿ ಓಡಿಸಿದ ಕೋಣಗಳು 100 ಮೀಟರ್ ಓಟವನ್ನು 9.55 ಸೆಕೆಂಡ್ ಳಲ್ಲಿ ಕ್ರಮಿಸಿ ದಾಖಲೆ ಬರೆದಿದ್ದು, ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು.

ಬೋಳದಗುತ್ತು ಸತೀಶ್‌ ಶೆಟ್ಟಿ ಅವರ ಬೊಳ್ಳ ಮತ್ತು ದೋನಿ ಕೋಣಗಳನ್ನು ವಿಶ್ವನಾಥ್‌ ಓಡಿಸಿದ್ದು, 125 ಮೀಟರ್‌ ಓಟವನ್ನು 11.44 ಸೆಕೆಂಡ್‌ಗಳಲ್ಲಿ ಓಡಿಸಿದ್ದಾರೆ. ಇದನ್ನು 100 ಮೀಟರ್‌ಗೆ ತಾಳೆ ಮಾಡಿದರೆ 9.15 ಸೆಕೆಂಡ್‌ ಆಗುತ್ತದೆ. ಅಂದಹಾಗೆ ಬೋಲ್ಟ್‌ 100 ಮೀಟರ್ ದೂರ ಕ್ರಮಿಸಲು ತೆಗೆದುಕೊಂಡಿದ್ದು 9.58 ಸೆಕೆಂಡ್‌. ಇದಕ್ಕಿಂತಲೂ ವೇಗವಾಗಿ ಬೈಂದೂರು ವಿಶ್ವನಾಥ್‌ ಓಡಿ ದಾಖಲೆ ಬರೆದಿದ್ದಾರೆ.

- Advertisement -

Latest News

error: Content is protected !!