Thursday, June 4, 2026
Homeಕರಾವಳಿಉಡುಪಿಕರಾವಳಿಯಲ್ಲಿ ವೈರಲ್ ಆಗಿತ್ತು ಕೋರಿ ಕಳ್ಳರ ವಿಡಿಯೋ: ಕೊನೆಗೂ ಕಾರ್ಕಳದಲ್ಲಿ ಸಿಕ್ಕಿ ಬಿದ್ರು ಕೋಳಿ ಕಳ್ಳರು

ಕರಾವಳಿಯಲ್ಲಿ ವೈರಲ್ ಆಗಿತ್ತು ಕೋರಿ ಕಳ್ಳರ ವಿಡಿಯೋ: ಕೊನೆಗೂ ಕಾರ್ಕಳದಲ್ಲಿ ಸಿಕ್ಕಿ ಬಿದ್ರು ಕೋಳಿ ಕಳ್ಳರು

- Advertisement -
- Advertisement -

ಕಾರ್ಕಳ : ಭಿಕ್ಷುಕರ ವೇಷದಲ್ಲಿ ಬಂದು ವೃದ್ಧ ದಂಪತಿ ಕೋಳಿ ಕದಿಯುವ ವಿಡಿಯೋ ಕರಾವಳಿಯಲ್ಲಿ ಭಾರೀ ವೈರಲ್ ಆಗಿತ್ತು. ಉಡುಪಿಯ ಕಾಪು ಸಮೀಪದ ಸಾಂತೂರ್ ಗ್ರಾಮದ ಮುದರಂಗಡಿ ಯಲ್ಲಿ ಬೇಬಿ ಪೂಜಾರ್ತಿಯವರ ಮನೆಯಲ್ಲಿ ಇವರು ಕೋಳಿ ಕದಿಯುವಾಗ ಅದನ್ನು ಬೇಬಿ ಪೂಜಾರ್ತಿ ಅವರ ಸೊಸೆ ವಿಡಿಯೋ ಮಾಡಿದ್ದರು. ಆ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಈ ಖದೀಮರು ಸಿಕ್ಕಿ ಬಿದ್ದಿದ್ದಾರೆ.

ವಿಡಿಯೋ ವೈರಲ್ ಆದ ಬಳಿಕ  ಕೋಳಿ ಸಾಕುವ ಕರಾವಳಿಗರು ಫುಲ್ ಅಲರ್ಟ್ ಆಗಿದ್ದರು. ಇದೇ ವೃದ್ಧ ದಂಪತಿ ಅಡ್ಯಾರ್ ನ  ಅರ್ಕುಳದಲ್ಲಿ ಇದೇ ರೀತಿ ಕೋಳಿ ಕದಿಯಲು ಯತ್ನಿಸಿದ್ದಾರೆ. ಈ ಸಂದರ್ಭ ಸಾರ್ವಜನಿಕರು ಈ ದಂಪತಿಯನ್ನು ಸೆರೆ ಹಿಡಿದಿದ್ದಾರೆ. ಆಗ ಇವರು ಇದೇ ರೀತಿ ಎಲ್ಲಾ ಕಡೆ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!