Monday, June 15, 2026
Homeಕರಾವಳಿತಪಾಸಣೆ ಮಾಡುತ್ತಿದ್ದ ನರ್ಸ್ ಗೆ ಲೈಂಗಿಕ ಕಿರುಕುಳ: ಉಳ್ಳಾಲದಲ್ಲಿ ಕಾಮುಕನ ಬಂಧನ

ತಪಾಸಣೆ ಮಾಡುತ್ತಿದ್ದ ನರ್ಸ್ ಗೆ ಲೈಂಗಿಕ ಕಿರುಕುಳ: ಉಳ್ಳಾಲದಲ್ಲಿ ಕಾಮುಕನ ಬಂಧನ

- Advertisement -
- Advertisement -

ಉಳ್ಳಾಲ:  ಆರೋಗ್ಯ ತಪಾಸಣೆಗೆಂದು ಬಂದಿದ್ದ ವ್ಯಕ್ತಿಯೋರ್ವ ತಪಾಸಣೆ ನಡೆಸುತ್ತಿದ್ದ ನರ್ಸ್ ಗೆ ಲೈಂಗಿಕ ಕಿರುಕುಳ ಘಟನೆ ಉಳ್ಳಾಲದ ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನು ಬಂಧಿತ ಆರೋಪಿಯನ್ನು ಕೆ.ಸಿ. ರೋಡ್ ಕಾಟುಂಗುರ ಗುಡ್ಡೆ ನಿವಾಸಿ ಇಬ್ರಾಹಿಂ ಖಲೀಲ್ (27) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಕೋಟೆಕಾರಿನ ಆರೋಗ್ಯ ಕೇಂದ್ರಕ್ಕೆ ಬಂದಿದ್ದ ಆರೋಪಿಯು ತಪಾಸಣೆ ನಡೆಸುತ್ತಿದ್ದ ನರ್ಸ್ ಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಕುರಿತು ಕೂಡಲೇ ಆಸ್ಪತ್ರೆ ಸಿಬ್ಬಂದಿ ಉಳ್ಳಾಲ ಪೊಲೀಸರ ಗಮನಕ್ಕೆ ತಂದಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!