Wednesday, June 3, 2026
Homeತಾಜಾ ಸುದ್ದಿಶಿವಮೊಗ್ಗ ಸ್ಫೋಟ ಪ್ರಕರಣ:ಗ್ರಾಮಸ್ಥರನ್ನು ಕಾಡ್ತಿದೆ , ಕಿವಿ, ಕಣ್ಣು, ಶ್ವಾಸಕೋಶದ ಸಮಸ್ಯೆ

ಶಿವಮೊಗ್ಗ ಸ್ಫೋಟ ಪ್ರಕರಣ:ಗ್ರಾಮಸ್ಥರನ್ನು ಕಾಡ್ತಿದೆ , ಕಿವಿ, ಕಣ್ಣು, ಶ್ವಾಸಕೋಶದ ಸಮಸ್ಯೆ

- Advertisement -
- Advertisement -

ಶಿವಮೊಗ್ಗ: ನಿನ್ನೆ ಶಿವಮೊಗ್ಗ ತಾಲೂಕಿನ ಹುಣಸೋಡುನಲ್ಲಿ ಭಾರೀ ಸ್ಫೋಟ ಸಂಭವಿಸಿದ ಪರಿಣಾಮ ಸ್ಫೋಟದ ಬಳಿಕ ಸುತ್ತಮುತ್ತಲ ಗ್ರಾಮಸ್ಥರ ಆರೋಗ್ಯದಲ್ಲಿ ವ್ಯತ್ಯಯವಾಗಿದೆ ಎನ್ನುವ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

ಹೌದು, ಭಾರೀ ಸೋಟದ ಬಳಿಕ ಸುತ್ತಮುತ್ತಲಿನ ಗ್ರಾಮಸ್ಥರ ಆರೋಗ್ಯದಲ್ಲಿ ಪರಿಣಾಮ ಬೀರಿದ್ದು, ಹಲವು ಜನರ ಕಿವಿ, ಕಣ್ಣು ಮತ್ತು ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಇನ್ನು ನಿನ್ನೆಯಿಂದ ಸಾಕಷ್ಟು ಜನರಿಗೆ ಸರಿಯಾಗಿ ಕಿವಿ ಕೇಳಿಸುತ್ತಿಲ್ಲ ಎಂದು ಹೇಳಲಾಗ್ತಿದೆ.

ಇನ್ನು ಕೆಲವು ಜನರಿಗೆ ಕಣ್ಣಿನ ಸಮಸ್ಯೆ ಎದುರಾಗಿದ್ದು, ಕಣ್ಣು ಮಂಜು ಮಂಜಾಗಿ ಕಾಣುತ್ತಿವೆ. ಇನ್ನು ಹಲವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಾಧ್ಯಮಗಳ ಮುಂದೆ ಈ ಕುರಿತು ಅಳಲು ತೋಡಿಕೊಂಡಿರುವ ಗ್ರಾಮಸ್ಥರು, ತಮ್ಮ ಗ್ರಾಮಗಳಿಗೆ ಆರೋಗ್ಯ ಅಧಿಕಾರಿಗಳು ಬರುವಂತೆ ಮನವಿ ಮಾಡಿಕೊಂಡಿದ್ದಾರೆ.

- Advertisement -

Latest News

error: Content is protected !!