Thursday, June 4, 2026
Homeತಾಜಾ ಸುದ್ದಿಮಲಪ್ರಭೆ ಬಳಿ ಸೆಲ್ಫಿ ತೆಗೆಯುವಾಗ ಜೇನುಹುಳು ದಾಳಿ: ಮೂವರು ನೀರುಪಾಲು, ಒಬ್ಬ ಹುಡುಗ-ಹುಡುಗಿ ಪಾರು

ಮಲಪ್ರಭೆ ಬಳಿ ಸೆಲ್ಫಿ ತೆಗೆಯುವಾಗ ಜೇನುಹುಳು ದಾಳಿ: ಮೂವರು ನೀರುಪಾಲು, ಒಬ್ಬ ಹುಡುಗ-ಹುಡುಗಿ ಪಾರು

- Advertisement -
- Advertisement -

ಹುಬ್ಬಳ್ಳಿ: ಸೆಲ್ಫಿ ತೆಗೆದುಕೊಳ್ಳುವಾಗ ಜೇನುನೊಣಗಳು ದಾಳಿ ಇಟ್ಟಿದ್ದು, ಅವುಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮೂವರು ನೀರುಪಾಲಾಗಿದ್ದರೆ, ಒಬ್ಬ ಯುವಕ ಹಾಗೂ ಒಬ್ಬಳು ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಕಿರೇಸೂರು ಬಳಿಯ ಮಲಪ್ರಭಾ ಕಾಲುವೆ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಈ ದುರ್ಘಟನೆ ಸಂಭವಿಸಿದೆ. ಐವರು ಒಂದೆಡೆ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಜೇನುನೊಣಗಳು ದಾಳಿ ಇಟ್ಟಿವೆ. ಈ ವೇಳೆ ನತಾಶಾ ಭಂಡಾರಿ ಹಾಗೂ ಸಲ್ಮಾನ್ ಪಿಳ್ಳೈ ಪ್ರಾಣಾಪಾಯದಿಂದ ಪಾರಾಗಿದ್ದರೆ, ಇತರ ಮೂವರು ನೀರುಪಾಲಾಗಿದ್ದಾರೆ.

ಸದ್ಯ, ನೀರುಪಾಲಾದ ಮೂವರಿಗಾಗಿ ಪೊಲೀಸರು ಮತ್ತು ಕಿರೇಸೂರು ಗ್ರಾಮಸ್ಥರು ಹುಡುಕಾಟ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ನವಲಗುಂದ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಆಗಮಿಸಿದ್ದು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!