Tuesday, June 9, 2026
Homeತಾಜಾ ಸುದ್ದಿಜಾಮೀನು ದೊರೆತರೂ ಪಂಜರದಿಂದ ಹೊರಬರಲಿಲ್ಲ ಗಿಣಿ- ಇಂದೂ ಜೈಲಲ್ಲೇ ಉಳಿದ ರಾಗಿಣಿ

ಜಾಮೀನು ದೊರೆತರೂ ಪಂಜರದಿಂದ ಹೊರಬರಲಿಲ್ಲ ಗಿಣಿ- ಇಂದೂ ಜೈಲಲ್ಲೇ ಉಳಿದ ರಾಗಿಣಿ

- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿಗೆ ಸುಪ್ರೀಂಕೋರ್ಟ್ ನಿನ್ನೆ ಜಾಮೀನು ಮಂಜೂರು ಮಾಡಿದೆ.ಆದರೆ ನಟಿಗೆ ಇನ್ನೂ ಜೈಲಿನಿಂದ ಮುಕ್ತಿ ಸಿಕ್ಕಿಲ್ಲ. ಬಿಡುಗಡೆ ಆದೇಶ ಜೈಲು ಅಧಿಕಾರಿಗಳಿಗೆ ತಲುಪದ ಹಿನ್ನೆಲೆಯಲ್ಲಿಅವರು ಜೈಲಿನಲ್ಲೇ ಕಾಲ ಕಳೆಯುವಂತಾಗಿದ್ದು ಹೊರಬರಲಾಗದೆ ಚಡಪಡಿಸುತ್ತಿದ್ದಾರೆ.

ಮಾಹಿತಿಯಂತೆ ಸುಪ್ರೀಂಕೋರ್ಟ್ ಆದೇಶದ ಪ್ರತಿಯನ್ನು ಎನ್.ಡಿ.ಪಿ.ಎಸ್. ಕೋರ್ಟ್ ಗೆ ತಲುಪಿಸಬೇಕು ಈವೇಳೆ ಎನ್.ಡಿ.ಪಿ.ಎಸ್. ಕೋರ್ಟ್ ಸೂಚಿಸಿದ ಶ್ಯೂರಿಟಿ ಒದಗಿಸಬೇಕು. ಬಳಿಕ ಕೋರ್ಟ್ ಬಿಡುಗಡೆ ಆದೇಶದ ಪ್ರತಿಯನ್ನು ಜೈಲಿನ ಅಧಿಕಾರಿಗಳಿಗೆ ತಲುಪಿಸುವುದು ವಾಡಿಕೆ. ಈ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅವರು ಜೈಲಿನಲ್ಲೇ ಉಳಿಯುವಂತಾಗಿದೆ.

- Advertisement -

Latest News

error: Content is protected !!