Sunday, June 7, 2026
Homeತಾಜಾ ಸುದ್ದಿಶಿವರಾಜ್ ಮಗನ ಸಂಭ್ರಮದ ಹುಟ್ಟುಹಬ್ಬ- ಚಾಲೆಂಜಿಂಗ್ ಸ್ಟಾರ್ ಕೊಟ್ಟ ಉಡುಗೊರೆ ಏನು ಗೊತ್ತಾ?

ಶಿವರಾಜ್ ಮಗನ ಸಂಭ್ರಮದ ಹುಟ್ಟುಹಬ್ಬ- ಚಾಲೆಂಜಿಂಗ್ ಸ್ಟಾರ್ ಕೊಟ್ಟ ಉಡುಗೊರೆ ಏನು ಗೊತ್ತಾ?

- Advertisement -
- Advertisement -

ಬೆಂಗಳೂರು: ಹಾಸ್ಯನಟ ಶಿವರಾಜ್ ಕೆ.ಆರ್. ಪೇಟೆ ಅವರ ಮೊದಲ ಮಗ ವಂಶಿಕ್ ಬರ್ತ್ ಡೇಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಜರಾಗಿದ್ದರು. ಶಿವರಾಜ್ ಮೊದಲ ಮಗ ವಂಶಿಕ್ ದರ್ಶನ್ ಅವರ ಬಲುದೊಡ್ಡ ಅಭಿಮಾನಿ. ಈ ವೇಳೆ ದರ್ಶನ್ ಅವರೇ ಸೆರೆ ಹಿಡಿದಿರುವ ವನ್ಯಜೀವಿ ಫೋಟೋವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ಕುರಿತು ಶಿವರಾಜ್ ಕೆ.ಆರ್. ಪೇಟೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಶಿವರಾಜ್ ಈ ಕುರಿತು ಸಂತಸದಿಂದ “ದರ್ಶನ್ ಸರ್ ಅವರನ್ನ ಮೀಟ್ ಮಾಡಿ ಅವರ ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮ ಪಟ್ಟೆವು. ನನ್ನ ಮಗನನ್ನ ಪ್ರೀತಿಯಿಂದ ಮಾತಾಡಿಸಿ ಅವನಿಗೆ ತಾವೇ ತೆಗೆದ ವನ್ಯಜೀವಿಯ ಫೋಟೋವನ್ನ ಕೂಡ ಗಿಫ್ಟ್ ಆಗಿ ಕೊಟ್ಟರು. ಥ್ಯಾಂಕ್ಯೂ ಡಿ ಬಾಸ್” ಎಂದು ಬರೆದುಕೊಂಡಿದ್ದಾರೆ.

- Advertisement -

Latest News

error: Content is protected !!