Saturday, August 29, 2026
Homeಕರಾವಳಿನಳಿನ್ ಕುಮಾರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಹರೀಶ್ ಕುಮಾರ್

ನಳಿನ್ ಕುಮಾರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಹರೀಶ್ ಕುಮಾರ್

- Advertisement -
- Advertisement -

ಮಂಗಳೂರು: “ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ” ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಈಗಾ ತಿಥಿ ಪಾರ್ಟಿ ಆಗ್ತಾ ಇದೆ ಎಂದು ಹೇಳಿದ್ದ ನಳಿನ್ ಕುಮಾರ್ ಗೆ ತಿರುಗೇಟು ನೀಡಿದ ಹರೀಶ್, ” ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಅಧಿಕಾರದ ಮದ ಏರಿದೆ, ಅವರಿಗೆ ನಾಲಿಗೆಯಲ್ಲಿ ಹಿಡಿತ ಇರಲಿ ಅತಿಯಾದರೆ ಜನರು ಹಾಸ್ಯಗಾರ ಎನ್ನುತ್ತಾರೆ” ಎಂದು ಹೇಳಿದ್ದಾರೆ.

ಸಂಸದ ನಳಿನ್ ಕುಮಾರ್ ಕಟೀಲ್‌ ಅಧಿಕಾರಕ್ಕೆ ಬಂದ ಬಳಿಕ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಅವರಿಗೆ ಸಂಪ್ರದಾಯ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮಗೆ ಸಂಪ್ರದಾಯ ಇದೆ” ಎಂದರು.

- Advertisement -

Latest News

error: Content is protected !!