Wednesday, June 3, 2026
Homeತಾಜಾ ಸುದ್ದಿದೇಶದಾದ್ಯಂತ ಇಂದಿನಿಂದ ಕೋವಿಡ್ ಲಸಿಕಾ ವಿತರಣೆ ಆರಂಭ: ರಾಜ್ಯದಲ್ಲಿ ಲಸಿಕೆ ಪಡೆದ ಮೊದಲ ವ್ಯಕ್ತಿ...

ದೇಶದಾದ್ಯಂತ ಇಂದಿನಿಂದ ಕೋವಿಡ್ ಲಸಿಕಾ ವಿತರಣೆ ಆರಂಭ: ರಾಜ್ಯದಲ್ಲಿ ಲಸಿಕೆ ಪಡೆದ ಮೊದಲ ವ್ಯಕ್ತಿ ಯಾರು ಗೊತ್ತಾ?

- Advertisement -
- Advertisement -

ಬೆಂಗಳೂರು : ದೇಶಾದ್ಯಂತ ಇಂದಿನಿಂದ ಕೊರೋನಾ ಸೋಂಕಿನ ಲಸಿಕಾ ವಿತರಣೆ ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇನ್ನೂ ರಾಜ್ಯದಲ್ಲೂ ಲಸಿಕಾ ಅಭಿಯಾನ ಆರಂಭಗೊಂಡಿದೆ.

ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗು ಮಾನ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕೋವಿಡ್ ಲಸಿಕೆ ವಿತರಣೆ ಕಾರ್ಯಕ್ಕೆ  ಚಾಲನೆ ನೀಡಿದರು.

ವಿಕ್ಟೋರಿಯಾ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ, ಬಿಡದಿ ಮೂಲದ ನಾಗರತ್ನ ಎಂಬವರಿಗೆ ಮೊದಲ ಲಸಿಕೆ ನೀಡಲಾಯಿತು. ಇದರೊಂದಿಗೆ ರಾಜ್ಯಾದ್ಯಂತ ಲಸಿಕೆ ವಿತರಣೆ  ಕಾರ್ಯ  ಅಧಿಕೃತವಾಗಿ ಚಾಲನೆ ಪಡೆದುಕೊಂಡಿತು.

- Advertisement -

Latest News

error: Content is protected !!