Thursday, June 4, 2026
Homeಕರಾವಳಿಮಂಗಳೂರಿನ ಪೊಲೀಸ್ ಕಮೀಷನರ್ ಶಶಿಕುಮಾರ್ ಹಾಡಿಗೆ ಫಿದಾ ಕರಾವಳಿಗರು

ಮಂಗಳೂರಿನ ಪೊಲೀಸ್ ಕಮೀಷನರ್ ಶಶಿಕುಮಾರ್ ಹಾಡಿಗೆ ಫಿದಾ ಕರಾವಳಿಗರು

- Advertisement -
- Advertisement -

ಮಂಗಳೂರು : ತಮ್ಮ ಕರ್ತವ್ಯ ನಿಷ್ಠೆಯಿಂದ ಹೆಸರಾಗಿರುವ ಮಂಗಳೂರಿನ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಇದೀಗ ಫುಲ್ ಫೇಮಸ್ ಆಗಿದ್ದಾರೆ. ಆದ್ರೆ ಅದು ಕೆಲಸದ ವಿಚಾರವಾಗಿ ಅಲ್ಲ. ಬದಲಾಗಿ ಅವರ ಗಾಯನದಿಂದಾಗಿ.

ಹೌದು..ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಎಲ್ಲರನ್ನು ಹಾಡಿನ ಮೂಲಕ ರಂಜಿಸಿದ್ದಾರೆ. ಭಕ್ತಿಗೀತೆಯ ಹಾಡಿನ ಮೂಲಕ ಭಕ್ತಿ ಭಾವದ ಹೊಳೆಯನ್ನೇ ಹರಿಸಿದ್ದಾರೆ. ಮಂಗಳೂರು ಕಮೀಷನರ್ ಶಶಿಕುಮಾರ್ ಅವರು ಪಾಂಡೇಶ್ವರದ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಆಗಮಿಸಿದ್ದರು. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಕೇಳುತ್ತಲೇ ಖುಷಿಗೊಂಡ ಅವರು, ಇದೇ ವೇದಿಕೆ ಏರಿ, ಭಕ್ತಿ ಗೀತೆ ಹಾಡುವ ಮೂಲಕ ಎಲ್ಲರನ್ನು ಹುಬ್ಬೇರಿಸಿದ್ದಾರೆ.

ಹೀಗೆ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಅವರ ಭಕ್ತಿ ಗೀತೆಯ ಹಾಡು ಕೇಳಿದ ಜನರು, ಮೆಚ್ಚುಗೆ ವ್ಯಕ್ತ ಪಡಿಸಿದ್ದಲ್ಲದೇ, ಖಡಕ್ ಅಧಿಕಾರಿ ಕಲಾ ಪ್ರೇಮಕ್ಕೆ ಮಾರು ಹೋಗಿದ್ದಾರೆ.

- Advertisement -

Latest News

error: Content is protected !!