Friday, June 5, 2026
Homeಕರಾವಳಿಉಡುಪಿಹೆಬ್ರಿಯಲ್ಲಿ ಹೊಸವರ್ಷದಂದೇ ಉಪನ್ಯಾಸಕ ಆತ್ಮಹತ್ಯೆ

ಹೆಬ್ರಿಯಲ್ಲಿ ಹೊಸವರ್ಷದಂದೇ ಉಪನ್ಯಾಸಕ ಆತ್ಮಹತ್ಯೆ

- Advertisement -
- Advertisement -

ಉಡುಪಿ:  ಹೆಬ್ರಿಯ  ಬಡಗುಡ್ಡೆ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಖಾಸಗಿ ಕಾಲೇಜಿನ ಉಪನ್ಯಾಸಕರೋರ್ವರು ಡೆತ್ ನೋಟ್ ಬರೆದಿಟ್ಟು ಮನೆಯ ಕೊಠಡಿಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.

ಐದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಇವರು ಪತ್ನಿಯೊಂದಿಗೆ ಹೆಬ್ರಿಯ ಬಾಡಿಗೆ ಮನೆಯೊಂದರಲ್ಲಿ ಅನ್ಯೋನ್ಯ ವಾಗಿದ್ದರು. ಇವರ ಪತ್ನಿಯು ಹೆಬ್ರಿಯ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ದುಡಿಯುತ್ತಿದ್ದು, ಇವರು ಮೂಡಬಿದಿರೆಯಲ್ಲಿ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ದುಡಿಯುತ್ತಿದ್ದರು. ಆದರೆ ಲಾಕ್ ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಹೆಬ್ರಿಯ ಬಾಡಿಗೆ ಮನೆಯಲ್ಲೇ ಇದ್ದರು ಎನ್ನಲಾಗಿದೆ.

ಸ್ಥಳಕ್ಕೆ ಹೆಬ್ರಿ ಪೊಲೀಸ್ ಠಾಣಾ ಅಧಿಕಾರಿ ಸುಮಾ ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ .

- Advertisement -

Latest News

error: Content is protected !!