Saturday, June 6, 2026
Homeಕರಾವಳಿಮಂಗಳೂರು: ಹೊಸ ವರ್ಷಾಚರಣೆಗೆ ಮೊದಲ ಬಲಿ, ಸಮುದ್ರದ ಕಿನಾರೆಯಲ್ಲಿ ಸಂಭ್ರಮಿಸಲು ಬಂದ ಕಡಬದ ವ್ಯಕ್ತಿ ನೀರುಪಾಲು

ಮಂಗಳೂರು: ಹೊಸ ವರ್ಷಾಚರಣೆಗೆ ಮೊದಲ ಬಲಿ, ಸಮುದ್ರದ ಕಿನಾರೆಯಲ್ಲಿ ಸಂಭ್ರಮಿಸಲು ಬಂದ ಕಡಬದ ವ್ಯಕ್ತಿ ನೀರುಪಾಲು

- Advertisement -
- Advertisement -

ಮಂಗಳೂರು: ಹೊಸ ವರ್ಷಕ್ಕೂ ಮುನ್ನಾ, ವರ್ಷದ ಕೊನೆಯಂದೇ ಹೊಸ ವರ್ಷಾಚರಣೆಗೆ ಬಂದವನ್ನು ನೀರುಪಾಲಾದ ಘಟನೆ ಮಂಗಳೂರು ಹೊರವಲಯದ ಚಿತ್ರಾಪುರ ಕಡಲತೀರದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕಡಬ ತಾಲೂಕಿನ ಆರ್ತಿಲ ನಿವಾಸಿ ಜಯರಾಮ ಗೌಡ(41) ಎಂದು ಗುರುತಿಸಲಾಗಿದೆ. ಇವರು ತನ್ನ ಐವರು ಸ್ನೇಹಿತರೊಂದಿಗೆ ಇಂದು ಸಸಿಹಿತ್ಲು ಬೀಚ್ ಬಳಿ ನಿಷೇಧ ಇದ್ದ ಕಾರಣ ಚಿತ್ರಾಪು ಅಳಿವೆ ಬಾಗಿಲು ಬಳಿಯಿಂದ ಬೀಚ್​ಗೆ ಹೋಗಿದ್ದರು. ನೀರಲ್ಲಿ ಆಟವಾಡುವಾಗ ಐವರೂ ಅಪಾಯಕ್ಕೆ ಸಿಲುಕಿದ್ದರು.

ಅವರ ರಕ್ಷಣೆಗೆ ಧಾವಿಸಿದ ಸರ್ಫರ್ ಶ್ಯಾಮ್ ಎಂಬುವವರು ನಾಲ್ವರ ಪ್ರಾಣ ಉಳಿಸಿದರು. ಅಷ್ಟರಲ್ಲಿ ಜಯರಾಮ್​ ಗೌಡ ಮೃತಪಟ್ಟಿದ್ದರು. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಸಾಮಾಜಿಕ, ಧಾರ್ಮಿಕ ರಂಗದಲ್ಲಿ ಗುರುತಿಸಿಕೊಂಡಿದ್ದು, ಜೇಸಿಐ ಕಡಬ ಕದಂಬ ಘಟಕದ ಪೂರ್ವಾಧ್ಯಕ್ಷರಾಗಿದ್ದರು‌.

- Advertisement -

Latest News

error: Content is protected !!