Saturday, June 6, 2026
Homeತಾಜಾ ಸುದ್ದಿನರಭಕ್ಷ ಹುಲಿಯ ದಾಳಿಗೆ ಬಾಲಕ ಬಲಿ!..

ನರಭಕ್ಷ ಹುಲಿಯ ದಾಳಿಗೆ ಬಾಲಕ ಬಲಿ!..

- Advertisement -
- Advertisement -

ಭೂಪಾಲ್: ಇಲ್ಲಿನ ಸಿಯೋನಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಲಿಯೊಂದು 12 ವರ್ಷದ ಬಾಲಕನ ಮೇಲೆ ದಾಳಿ ನಡೆಸಿ ಕೊಂದುಹಾಕಿದೆ. ಬಾಲಕನು ದನ ಮೇಯಿಸಲು ಹೋಗಿದ್ದ ಈತನ ದೇಹ ಅರಣ್ಯದಲ್ಲಿ ಪತ್ತೆಯಾಗಿತ್ತು. ಬಾಲಕನ ಮೇಲೆ ಹುಲಿ ದಾಳಿ ನಡೆಸಿ ತಿಂದು ಹಾಕಿರಬಹುದೆಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ.

ಈತನು ಎಮ್ಮೆಗಳನ್ನು ಮೇಯಿಸಲು ಖೈರಿ ಅರಣ್ಯಕ್ಕೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ನರಭಕ್ಷ ಹುಲಿಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ಕಾಡಿನಲ್ಲಿ ಬೋನ್ ಇಡುವುದು ಹಾಗು ಇತರ ಹಲವು ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಸ್ಥಳೀಯ ಜನ ಈ ಘಟನೆಯಿಂದ ಭಯಭೀತರಾಗಿದ್ದಾರೆ.

- Advertisement -

Latest News

error: Content is protected !!