ಕೇರಳ: ಶೂಟಿಂಗ್ ಬಿಡುವಿನ ವೇಳೆ ಡ್ಯಾಂಗೆ ಸ್ನಾನ ಮಾಡಲು ಎಂದ ಹೋದ ಮಲಯಾಳಂ ಖ್ಯಾತ ನಟ ಅನಿಲ್ ನೆಡುಂಗಾಡ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತೊಡುಪುಳದಲ್ಲಿ ನಡೆದಿದೆ.

ಮಲನ್ಕರ್ ಡ್ಯಾಂ ಬಳಿ ಮಲಯಾಳಂ ಸಿನಿಮಾ ‘ಪೀಸ್’ ನ ಚಿತ್ರೀಕರಣ ನಡೆಯುತ್ತಿತ್ತು. ಅನಿಲ್ ನೆಡುಮಂಗದ್ ಸಿನಿಮಾದಲ್ಲಿ ಪಾತ್ರವಹಿಸಿದ್ದು, ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಚಿತ್ರೀಕರಣದ ಬಿಡುವಿನ ವೇಳೆ ಅನಿಲ್ ಹಾಗೂ ಕೆಲವರು ಸ್ನಾನ ಮಾಡಲೆಂದು ಮಲನ್ಕರ ಡ್ಯಾಂ ಗೆ ಹೋಗಿದ್ದರು, ಈ ವೇಳೆ ಅನಿಲ್ ನೀರಲ್ಲಿ ಮುಳುಗಿದ್ದಾರೆ.
ನಿನ್ನೆ ಮಧ್ಯಾಹ್ನದ ವೇಳೆಗೆ ಸ್ನೇಹಿತರ ಜೊತೆ ಅನಿಲ್ ಸ್ನಾನಕ್ಕೆಂದು ತೆರಳಿದ್ದರು.ಆ ವೇಳೆ ಅವರು ನೀರಿನಲ್ಲಿ ಮುಳುಗಿದ್ದಾರೆ. ಕೂಡಲೇ ಸ್ನೇಹಿತರು ಹುಡುಕಾಟ ನಡೆಸಿದ್ದಾರೆ.ಆದರೆ ಅವರು ಪತ್ತೆಯಾಗಿಲ್ಲ. ರಕ್ಷಣಾ ತಂಡದವರು ಬಂದು ರಕ್ಷಣಾ ಕಾರ್ಯಾಚರಣೆ ನಡೆಸಿದಾಗ ಸಂಜೆ ವೇಳೆಗೆ ಅವರ ಮೃತದೇಹ ಪತ್ತೆಯಾಗಿದೆ.

ಇನ್ನು ಅನಿಲ್ ಅವರ ನಿಧನಕ್ಕೆ ಮಲಯಾಳಂ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ಅನಿಲ್ ಅವರು ಕೊನೆಯದಾಗಿ ಪಾಪಮ್ ಚೆಯ್ಯತವರ್ ಕಲ್ಲೆರಿಯತ್ತೆ’ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾಗಿತ್ತು.


