Thursday, June 4, 2026
Homeಕರಾವಳಿಪುತ್ತೂರಿನಲ್ಲಿ ಬೆಳ್ಳಂಬೆಳಗ್ಗೆ ಪ್ರತ್ಯಕ್ಷವಾದ ಚಿರತೆ: ಆತಂಕದಲ್ಲಿ ಸ್ಥಳೀಯ ನಿವಾಸಿಗಳು

ಪುತ್ತೂರಿನಲ್ಲಿ ಬೆಳ್ಳಂಬೆಳಗ್ಗೆ ಪ್ರತ್ಯಕ್ಷವಾದ ಚಿರತೆ: ಆತಂಕದಲ್ಲಿ ಸ್ಥಳೀಯ ನಿವಾಸಿಗಳು

- Advertisement -
- Advertisement -

ಪುತ್ತೂರು: ಇಲ್ಲಿನ ಬನ್ನೂರಿನಲ್ಲಿ ನಿನ್ನೆ ಬೆಳ್ಳಂಬೆಳಗ್ಗೆ ಚಿರತೆ ಪ್ರತ್ಯಕ್ಷವಾಗಿದ್ದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಬನ್ನೂರು ಕುಂಟ್ಯಾನ ಸದಾಶಿವ ದೇವಸ್ಥಾನಕ್ಕೆ ನಸುಕಿನ ಜಾವ ಭಕ್ತರೊಬ್ಬರು ಹೋಗುತ್ತಿದ್ದ ವೇಳೆ ಅವರಿಗೆ ಚಿರತೆಯೊಂದು ಕಾಣಿಸಿಕೊಂಡಿದೆ.

ಬಳಿಕ ಮಧ್ಯಾಹ್ನ ಮಾಜಿ ಪುರಸಭಾ ಸದಸ್ಯ ಹಲಂಗ ರಾಮಣ್ಣ ಗೌಡರ ಮನೆಯ ಬಳಿಯೂ ಚಿರತೆ ಪ್ರತ್ಯಕ್ಷವಾಗಿದ್ದು ಜನ ಭಯದಲ್ಲೇ ಓಡಾಡುವಂತಾಗಿದೆ. ಮನೆಯಿಂದ ಹೊರಗೆ ಬರೋದಕ್ಕೆ ಹೆದರುವಂತಾಗಿದೆ.

ಚಿರತೆ ಮಾಜಿ ಪುರಸಭಾ ಸದಸ್ಯ ಹಲಂಗ ರಾಮಣ್ಣ ಗೌಡರ ಮನೆಯ ಬಳಿಯಿಂದ ಪಕ್ಕದ ತೆಂಗಿನ ಕೊಪ್ಪಳಕ್ಕೆ ಹೋಗಿದ್ದು ಅಲ್ಲಿಂದ ಡಂಪಿಂಗ್ ಯಾರ್ಡ್ ಪಕ್ಕದ ಗುಡ್ಡೆಗೆ ಹೋಗಿದೆ ಅಂತಾ ಹೇಳಲಾಗುತ್ತಿದೆ. ಇನ್ನು ಈ ಬಗ್ಗೆ ಮಾಹಿತಿ ತಿಳಿದ ಅರಣ್ಯ ಇಲಾಖೆ ಮತ್ತು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ

- Advertisement -

Latest News

error: Content is protected !!