Thursday, June 4, 2026
Homeಕರಾವಳಿನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ವೃದ್ಧೆ

ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ವೃದ್ಧೆ

- Advertisement -
- Advertisement -

ಉಳ್ಳಾಲ: ನೇತ್ರಾವತಿ ನದಿಗೆ ಹಾರಿ ವೃದ್ಧೆಯೊಬ್ಬರು ಆತ್ಮಹತ್ಯ.ಗೆ ಶರಣಾಗಿರುವ ಘಟನೆ ಮಂಗಳೂರಿನ ಕೋಟೆಕಾರಿನಲ್ಲಿ ನಡೆದಿದೆ. ಕೋಟೆಕಾರಿನ ಮಾಡೂರು ನಿವಾಸಿ ಶಾರದಾ ಗಟ್ಟಿ ಆತ್ಮಹತ್ಯೆಗೆ ಶರಣಾದ ವೃದ್ಧೆ.

ಉಚ್ಚಿಲದ ಸಂಕೋಳಿ ನಿವಾಸಿಯಾಗಿರುವ ಶಾರದಾ, ಸದ್ಯ ಮಾಡೂರಿನಲ್ಲಿರುವ ಮಗಳ ಮನೆಯಲ್ಲಿ ವಾಸವಾಗಿದ್ದರು. ಕಳೆದ ಡಿ. 15ರಂದು ಉಚ್ಚಿಲ ಸಂಕೋಳಿಗೆಯ ತರವಾಡಿನ ಮನೆಗೆ ಸಂಕ್ರಾಂತಿ ಪೂಜೆಗೆ ತೆರಳಿದ್ದ ಅವರು, ಬಳಿಕ ನಾಪತ್ತೆಯಾಗಿದ್ದರ. ಆದರೆ ಮನೆ ಮಂದಿಯೆಲ್ಲ ಶಾರದಾ ಅವರು ಬೇರೆ ಮಕ್ಕಳ ಮನೆಗೆ ತೆರಳಿರಬಹುದು ಎಂದು ಸುಮ್ಮನಿದ್ದು, ಇಂದು ಕೂಡಾ ಮನೆಗೆ ಹಿಂತಿರುಗದ ಹಿನ್ನೆಲೆ ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದರು.

ಇದೇ ವೇಳೆ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾದ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿರಿಸಲಾಗಿದೆ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಮನೆಯವರು ಅಲ್ಲಿ ಹೋಗಿ ಪರಿಶೀಲಿಸಿದಾಗ  ಅದು ಶಾರದಾ ಗಟ್ಟಿ ಅವರ ಮೃತದೇಹ ಎಂಬುವುದು ಗೊತ್ತಾಗಿದೆ.

- Advertisement -

Latest News

error: Content is protected !!