- Advertisement -
- Advertisement -
ಕಾಶ್ಮೀರ: ಹಕ್ಕಿಗಾಗಿ ಹಾಡು ಹೇಳಿದ ಹಾಡುಗಾರನೊಬ್ಬ ಈಗ ಸಾಕಷ್ಟು ಜನಮನ್ನಣೆ ಪಡೆದಿದ್ದಾರೆ. ಇವರ ಹಾಡು @swastikmastaan ಎಂಬ ಇನ್ಸ್ ಟಾಗ್ರಾಂ ಖಾತೆಯಲ್ಲಿ ವಿಡಿಯೋ ರೂಪದಲ್ಲಿ ಅಪ್‌ಲೋಡ್ ಆಗಿದ್ದು, ಸಖತ್ ಫೇಮಸ್ ಆಗಿದೆ. ಆ ವಿಡಿಯೋದಲ್ಲಿ ಕಾಶ್ಮೀರಿ ಹಾಡು “ಮಾಯಿ ಛಾಯಿ” ಹಾಡನ್ನು ಕಾರಿನ ಮೇಲೆ ಕುಳಿತ ಹಕ್ಕಿಗಾಗಿ ಹಾಡುಗಾರ ಅದರ ಎದುರು ನಿಂತು ಸುಮಧುರ ಸ್ವರದಲ್ಲಿ ಹಾಡುತ್ತಿದ್ದಾರೆ.
ಕಾಶ್ಮೀರದ ಪ್ರಸಿದ್ಧ ಹಳೆಯ ಹಾಡು “ಮಾಯಿ ಛಾಯಿ” ಗಾಯಕನ ಕಂಠದಲ್ಲಿ ಸುಮಧುರವಾಗಿ ಹಾಡಿದ್ದಾರೆ.ಹಾಡಿನ ಅರ್ಥದಲ್ಲಿ “ನನ್ನ ಆತ್ಮ ನಿನ್ನ ಪ್ರೀತಿಗೆ ಹಂಬಲಿಸುತ್ತದೆ. ನನ್ನ ಪ್ರೀತಿಯ ಅಮ್ಮ ನಾನು ನನ್ನ ಆತ್ಮವನ್ನು ನಿನಗಾಗಿ ಸಮರ್ಪಿಸುತ್ತೇನೆ” ಎಂಬ ಭಾವಾರ್ಥವನ್ನು ಹಾಡು ಹೊಂದಿದ್ದನ್ನು ಹಾಡುಗಾರ ವಿವರಿಸಿ ಹೇಳಿದ್ದು ಜನಮನ್ನಣೆ ಗಳಿಸಿದೆ.
- Advertisement -