Thursday, June 4, 2026
Homeತಾಜಾ ಸುದ್ದಿನಟಿ ರೆಜಿನಾ ಬೆತ್ತಲೆ ಫೋಟೋ ನೋಡಲು ಕ್ಲಿಕ್ ಮಾಡಿದವರಿಗೆ ಕಂಡಿದ್ದು ಏನು ಗೊತ್ತಾ..?

ನಟಿ ರೆಜಿನಾ ಬೆತ್ತಲೆ ಫೋಟೋ ನೋಡಲು ಕ್ಲಿಕ್ ಮಾಡಿದವರಿಗೆ ಕಂಡಿದ್ದು ಏನು ಗೊತ್ತಾ..?

- Advertisement -
- Advertisement -

ಚೆನ್ನೈ: ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿರುವ ರೆಜಿನಾ ಕಸ್ಸಂದ್ರ ಕನ್ನಡ ಸಿನಿಮಾದಲ್ಲೂ ನಟಿಸಿ ಚಿರಪರಿಚಿತರಾಗಿದ್ದಾರೆ. ನಟ ಚೇತನ್ ಅಭಿನಯದ ಸೂರ್ಯಕಾಂತಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು.

ಇತ್ತೀಚೆಗೆ ಅವರ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳಿಗೆ ಖುಷಿ ಕೊಟ್ಟು ಆ ಕ್ಷಣವೇ ನಿರಾಸೆ ಮಾಡಿದ್ದಾರೆ. ಅವರ ಹುಟ್ಟುಹಬ್ಬದ ದಿನ ಇನ್ಸ್ಟಾಗ್ರಾಮ್ ನಲ್ಲಿ ಫೋಟೋವೊಂದನ್ನು ಹಾಕಿದ್ದರು. ಆ ಪೋಟೋಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಬಂದಿದೆ. ಅದರ ಜೊತೆಗೆ ಒಂದಷ್ಟು ಬೇಸರದ ಕಮೆಂಟ್ ಗಳು ಬಂದಿವೆ.

ಹುಟ್ಟುಹಬ್ಬ ಆಚರಣೆಯ ಬಳಿಕ ರಜಿನಾ ಒಂದು ಪೋಸ್ಟ್ ಮಾಡಿದ್ದರು. ಸುಂದರ ತಾಣವೊಂದಲ್ಲಿ ತುಂಡುಡುಗೆ ಧರಿಸಿದ ಫೋಟೋವನ್ನು ಹರಿಬಿಟ್ಟು, ಬರ್ತಡೇಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ ಹೇಳಿದ್ದರು. ಆದರೆ, ಅಷ್ಟೇ ನಿರಾಸೆಯನ್ನೂ ಮಾಡಿದ್ದಾರೆ. ಅದಕ್ಕೆ ಕಾರಣ ಅವರು ಮಾಡಿದ ಒಂದು ಇನ್​ಸ್ಟಾಗ್ರಾಂ ಪೋಸ್ಟ್. ತುಂಡುಡುಗೆ ಧರಿಸಿದ ಫೋಟೋದಲ್ಲಿ ಟ್ವಿಸ್ಟ್ ಒಂದನ್ನು ನೀಡಿದ್ದ ರೆಜಿನಾ, ನನ್ನ ಬೆತ್ತಲೆ ಫೋಟೋಗಳನ್ನು ನೋಡಲು ಎಡಕ್ಕೆ ಸ್ವೈಪ್ ಮಾಡಿ ಎಂದಿದ್ದರು.

ಅನೇಕ ನೆಟ್ಟಿಗರು ರೆಜಿನಾ ಹೇಳಿದಂತೆ ಎಡಕ್ಕೆ ಸ್ವೈಪ್ ಮಾಡಿ ನೋಡಿದ್ದಾರೆ. ಅವರು ಹೇಳಿದಂತೆ ಬೆತ್ತಲೆ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಆದರೆ, ರೆಜಿನಾ ಕೊಟ್ಟ ಟ್ವಿಸ್ಟ್ ಎಂಥದ್ದು ಅಂದರೆ ಆ ಬೆತ್ತಲೆ ಫೋಟೋಗಳು ತಾವು ಮಗುವಾಗಿದ್ದಾಗ ತೆಗಿಸಿದಂತದ್ದು, ಬಾತ್ಟಬ್ನಲ್ಲಿ ಬೆತ್ತಲೆ ಕುಳಿತು ಸ್ನಾನ ಮಾಡುವ ಫೋಟೋಗಳನ್ನು ಹರಿಬಿಟ್ಟು ರೆಜಿನಾ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

- Advertisement -

Latest News

error: Content is protected !!