Friday, June 5, 2026
Homeತಾಜಾ ಸುದ್ದಿಕನ್ನಡಿಗರ ಕ್ಷಮೆ ಕೋರಿದ ನಟ ವಿಜಯ್ ರಂಗರಾಜು-ಆತನನ್ನು ಕ್ಷಮಿಸಲಾಗದು ಎಂದು ಸುಮಲತಾ ಹೇಳಿದ್ದೇಕೆ ?

ಕನ್ನಡಿಗರ ಕ್ಷಮೆ ಕೋರಿದ ನಟ ವಿಜಯ್ ರಂಗರಾಜು-ಆತನನ್ನು ಕ್ಷಮಿಸಲಾಗದು ಎಂದು ಸುಮಲತಾ ಹೇಳಿದ್ದೇಕೆ ?

- Advertisement -
- Advertisement -

ಬೆಂಗಳೂರು:ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ವಿಷ್ಣುವರ್ಧನ್‌ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ವಿಜಯ್‌ ರಂಗರಾಜು ಬಗ್ಗೆ ಕನ್ನಡ ಚಿತ್ರರಂಗ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಕನ್ನಡ ನಟರಾದ ಪುನೀತ್‌ ರಾಜ್‌ಕುಮಾರ್‌, ಸುದೀಪ್‌, ಯಶ್‌, ಜಗ್ಗೇಶ್‌ ಸೇರಿದಂತೆ ಹೆಚ್ಚಿನೆಲ್ಲ ನಟರು, ವಿಷ್ಣುವರ್ಧನ್‌ ಅಭಿಮಾನಿಗಳು ವಿಜಯ್‌ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು.

ಈ ಬಗ್ಗೆ ವಿಷ್ಣುಸೇನೆ, ವಿಷ್ಣುವರ್ಧನ್‌ ಅಭಿಮಾನಿಗಳು ವಿಜಯ್‌ ವಿರುದ್ಧ ಕಾನೂನು ಸಮರಕ್ಕೆ ಹೊರಟಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ದೂರು ದಾಖಲಿಸಿತ್ತು. ಆದರೆ ವಿಷಯ ಗಂಭೀರ ವಾದಾಗ ವಿಜಯ್‌ ರಂಗರಾಜು ಸಮಸ್ತ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದಾರೆ. ಆ ದಿನ ನಾನು ವಿಷ್ಣು ಅವರನ್ನ ಹಿಡಿದುಕೊಂಡಿರಲಿಲ್ಲ. ಮಾತನಾಡುವ ಉತ್ಸಾಹದಲ್ಲಿ ತಪ್ಪು ಮಾಹಿತಿ ಹಂಚಿಕೊಂಡಿದ್ದೇನೆ.ನಾನು ದೊಡ್ಡ ತಪ್ಪು ಮಾಡಿದ್ದೇನೆ. ಅದಕ್ಕೆ ಶಿಕ್ಷೆ ಎಂಬಂತೆ ನನಗೆ ಕೊರೋನಾ ಬಂದಿದೆ ಅದಕ್ಕೆ ಮಾಸ್ಕ್‌ ಹಾಕಿಕೊಂಡಿದ್ದೇನೆ ಎಂದು ವಿಡಿಯೋದಲ್ಲಿ ಆತ ಕ್ಷಮೆ ಕೇಳಿದ್ದಾರೆ.

ಆದರೆ ಈ ವಿಷಯದಲ್ಲಿ ವಿಜಯ್‌ ವಿರುದ್ಧ ರೊಚ್ಚಿಗೆದ್ದಿರುವ ಸುಮಲತಾ “ವಿಷ್ಣುವರ್ಧನ್‌ ಅವರ ವ್ಯಕ್ತಿತ್ವ, ವರ್ಚಸ್ಸು ಅವರನ್ನು ಪ್ರೀತಿಸುವ ಅಸಂಖ್ಯಾತ ಅಭಿಮಾನಿಗಳಿಗೆ ಗೊತ್ತು. ನಾಯಿ ಬೊಗಳಿದರೆ ದೇವಲೋಕ ಹಾಳಾಗದು ಎಂಬುದಕ್ಕೆ ಇದೊಂದು ಸರಿಯಾದ ಉದಾಹರಣೆ” ಎಂದು ಹೇಳಿದ್ದಾರೆ ಇಂತಹ ’ಚೀಪ್‌ ಪಬ್ಲಿಸಿಟಿ’ ಗಾಗಿ ಮನಬಂದಂತೆ ಬಾಯಿ ಹರಟುವ ವ್ಯಕ್ತಿಯ ಕ್ಷಮೆಗೆ ಅರ್ಥವಿಲ್ಲ ಇವರು ಕ್ಷಮೆಗೆ ಅರ್ಹರಲ್ಲ ಕ್ಷಮಿಸಲು ಆಗದು, ಕ್ಷಮಿಸಲು ಬಾರದು ಎಂದು ಖಾರವಾಗಿ ನುಡಿದಿದ್ದಾರೆ

- Advertisement -

Latest News

error: Content is protected !!