Wednesday, June 3, 2026
Homeತಾಜಾ ಸುದ್ದಿಟಿ.ಆರ್.ಪಿ ದುರ್ಬಳಕೆ ಆರೋಪ- ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖನ್ಚಂದಾನಿ ಬಂಧನ

ಟಿ.ಆರ್.ಪಿ ದುರ್ಬಳಕೆ ಆರೋಪ- ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖನ್ಚಂದಾನಿ ಬಂಧನ

- Advertisement -
- Advertisement -

ಮುಂಬೈ: ಟಿ.ಆರ್.ಪಿ ದುರ್ಬಳಕೆ ಆರೋಪದ ಮೇಲೆ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖನ್ಚಂದಾನಿ ಅವರನ್ನು ಮುಂಬೈ ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ. ಕೆಲವು ಟೆಲಿವಿಷನ್ ಚಾನೆಲ್ ಗಳು ಟಿಆರ್ ಪಿ ಸಂಖ್ಯೆಗಳನ್ನು ರಿಗ್ಗಿಂಗ್ ಮಾಡುತ್ತಿದೆ ಎಂದು ಆರೋಪಿಸಿ ರೇಟಿಂಗ್ ಏಜೆನ್ಸಿ ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಹನ್ಸಾ ರಿಸರ್ಚ್ ಗ್ರೂಪ್ ಮೂಲಕ ಕಳೆದ ತಿಂಗಳು ದೂರು ದಾಖಲಿಸಿತ್ತು.

ಈ ಪಟ್ಟಿಯಲ್ಲಿ ರಿಪಬ್ಲಿಕ್ ಟಿವಿ ಹೆಸರು ಕೇಳಿಬಂದಿತ್ತು. ಸಿಇಒ ವಿಕಾಸ್ ಖನ್ಚಂದಾನಿ ಅವರ ವಿಚಾರಣೆ ಈ ಹಿಂದೆ ನಡೆದಿತ್ತು. ಈಗ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಬಂಧಿಸಲಾಗಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!