- Advertisement -
- Advertisement -
ತಿರುಮಲ:ಇತ್ತೀಚಿನ ದಿನಗಳಲ್ಲಿ ವಂಚಕರು ಜನರ ಶ್ರದ್ಧೆ ಭಕ್ತಿಗಳನ್ನು ಬಳಸಿಕೊಂಡು ಮೋಸ ಮಾಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲ ತಾಣಗಳ ಮೂಲಕ ವಿಶ್ವದಲ್ಲೆಡೆ ತಿರುಮಲ ತಿರುಪತಿ ದೇಗುಲದ ಲಡ್ಡು ಪ್ರಸಾದ ತಲುಪಿಸುವ ಸೋಗಿನಲ್ಲಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ನಕಲಿ ವೆಬ್ ಸೈಟ್ ವಿರುದ್ಧ ತಿರುಪತಿ ಪೂರ್ವ ವಿಭಾಗದ ಪೊಲೀಸ್ ಠಾಣೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನ ಸಂಸ್ಥೆ(ಟಿಟಿಡಿ) ದೂರು ನೀಡಿದೆ.ಈ ಬಗ್ಗೆ ಸ್ಪಷ್ಟನೆ ನೀಡಿರುವ ಟಿಟಿಡಿ ಚೇರ್ಮನ್ ವೈವಿ ಸುಬ್ಬಾರೆಡ್ಡಿ ಯಾವುದೇ ವೆಬ್ ತಾಣದ ಮೂಲಕ ಲಡ್ಡು ಪ್ರಸಾದವನ್ನು ಟಿಟಿಡಿ ಹಂಚುತ್ತಿಲ್ಲ ಎಂದು ತಿಳಿಸಿದ್ದಾರೆ.ಕಳೆದ ವಾರ ಕಾಣಿಸಿಕೊಂಡ ಬಾಲಾಜಿ ಪ್ರಸಾದಮ್ ಹೆಸರಿನ ವೆಬ್ ತಾಣದ ಮೂಲಕ ಈ ವಂಚನೆಯಾಗಿದೆ.
- Advertisement -