Friday, June 5, 2026
Homeತಾಜಾ ಸುದ್ದಿಹಡಗಿನಲ್ಲಿ ಸ್ನೇಹಿತನ ಬರ್ತಡೇ ಪಾರ್ಟಿ ಆಚರಿಸಲು ಹೋಗಿ ನೀರಿಗೆ ಬಿದ್ದ ಯುವಕ: ಸಮುದ್ರಕ್ಕೆ ಬಿದ್ದರೂ ಈತ...

ಹಡಗಿನಲ್ಲಿ ಸ್ನೇಹಿತನ ಬರ್ತಡೇ ಪಾರ್ಟಿ ಆಚರಿಸಲು ಹೋಗಿ ನೀರಿಗೆ ಬಿದ್ದ ಯುವಕ: ಸಮುದ್ರಕ್ಕೆ ಬಿದ್ದರೂ ಈತ ಬದುಕಿ ಬಂದದ್ದು ಹೇಗೆ ಗೊತ್ತಾ?

- Advertisement -
- Advertisement -

ದುಬೈ: ಹಡಗಿನಲ್ಲಿ ಪಾರ್ಟಿ ಮಾಡುವುದು ಅನೇಕರ ಕನಸು. ಅದೇ ರೀತಿ ಹಡಗಿನಲ್ಲಿ ಪಾರ್ಟಿ ಮಾಡಲು ಹೋದ ಭಾರತೀಯ ಮೂಲದ ಯುವಕನೊಬ್ಬ ದುಬೈನ ಸಮುದ್ರದಲ್ಲಿ ಬಿದ್ದು ಒದ್ದಾಡಿದ ಘಟನೆ ಇದೀಗ ಬೆಳಕಿಗೆ ಬಂದಿದೆ.

27 ವರ್ಷದ ರಜ್ವೀರ್​ ವಕಾನಿ ಭಾರತೀಯ ಮೂಲದವನಾಗಿದ್ದು, ದೂರದ ದುಬೈನಲ್ಲಿ ಕೆಲಸ ಮಾಡುತ್ತಿದ್ದಾನೆ. ಇತ್ತೀಚೆಗೆ ಆತನ ಸ್ನೇಹಿತನ ಜನ್ಮದಿನವಿತ್ತಂತೆ. ಅದಕ್ಕೆಂದು ಸ್ನೇಹಿತರೆಲ್ಲ ಸೇರಿ ಹಡಗೊಂದನ್ನು ಬಾಡಿಗೆ ಪಡೆದು ಅದರಲ್ಲಿ ಪಾರ್ಟಿ ಆಯೋಜಿಸಿದ್ದಾರೆ. ಪಾರ್ಟಿ ನಡೆಯುತ್ತಿದ್ದ ಹಡಗು ದುಬೈ ಕರಾವಳಿ ತೀರದಿಂದ ಹೊರಟು ಸಾಗಿದೆ. ಪಾರ್ಟಿ ನಡೆಯುತ್ತಿರುವಾಗ ಮೇಲಿನ ಮಹಡಿಗೆ ಹೋಗಿ ಎಂಜಾಯ್​ ಮಾಡುವ ನಿರ್ಧಾರ ಮಾಡಿದ್ದಾರೆ. ಒಬ್ಬೊಬ್ಬರಾಗಿ ಮೇಲೆ ಹತ್ತಿ ಹೋಗಿದ್ದಾರೆ. ಕೊನೆಯಲ್ಲಿದ್ದ ರಜ್ವೀರ್​ ಮೇಲೆ ಹತ್ತುವಾಗ ಕಾಲು ಜಾರಿದ್ದು, ಆತ ಸೀದಾ ಸಮುದ್ರದೊಳಗೆ ಬಿದ್ದಿದ್ದಾನೆ. ಸಹಾಯಕ್ಕಾಗಿ ಕೂಗಿದ್ದಾನಾದರೂ ಯಾರಿಗೂ ಅದು ಕೇಳಿಸಿಲ್ಲ.

ತಾನಿದ್ದ ಹಡಗು ಸಹಾಯಕ್ಕೆ ಬರಬಹುದು ಎಂದು ಕೆಲ ಸಮಯ ಕಾದಿದ್ದಾನೆ. ಆದರೆ ಹಡಗಿನ ಸಿಬ್ಬಂದಿ ಈತನನ್ನು ಗಮನಿಸದೆಯೇ ಮುಂದೆ ಸಾಗಿದ್ದಾರೆ. ನಂತರ ಆತ ಸುತ್ತ ಮುತ್ತ ನೋಡಿದ್ದಾನೆ. ದೂರದಲ್ಲೆಲ್ಲೋ ಒಂದು ಸಣ್ಣ ಲೈಟ್​ ಕಾಣಿಸಿಕೊಂಡಿದೆ. ಗಟ್ಟಿ ಮನಸ್ಸು ಮಾಡಿ ಆ ಲೈಟ್​ನತ್ತ ಈಜಲಾರಂಭಿಸಿದ್ದಾನೆ. ಬರೋಬ್ಬರಿ 2 ಗಂಟೆ ಈಜಿದ ನಂತರ ಆತನಿಗೆ ದಡ ಸಿಕ್ಕಿದೆ. ಅಲ್ಲಿದ್ದ ಮೀನುಗಾರರು, ಆತನನ್ನು ರಕ್ಷಿಸಿದ್ದು, ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆತನ ಸ್ನೇಹಿತರೂ ಬಂದಿದ್ದು, ಇದೀಗ ರಜ್ವೀರ್​ ಸುರಕ್ಷಿತವಾಗಿ ಮನೆಯಲ್ಲಿದ್ದಾನೆ. ಘಟನೆಯಿಂದಾಗಿ ಆತನ ಫೋನು ಮತ್ತು ಕ್ಯಾಮೆರಾ ನೀರು ಪಾಲಾಗಿದೆ.

- Advertisement -

Latest News

error: Content is protected !!