- Advertisement -
- Advertisement -
ಉಡುಪಿ:ಇಲ್ಲಿನ ಕಡಿಯಾಳಿ ನಿವಾಸಿಯಾದ ದಾಮೋದರ್ ಐತಾಳ್ (85) ಇಂದು ಬೆಳಿಗ್ಗೆ ನಿಧನರಾದರು. ಅವರು ಖ್ಯಾತ ಶಿಕ್ಷಣ ತಜ್ಞರಾಗಿದ್ದರು. ಬಳಕೆದಾರರ ವೇದಿಕೆಯ ಮಾಜಿ ಸಂಚಾಲಕರಾಗಿದ್ದ ಕೆ.ದಾಮೋದರ್ ಐತಾಳ್ ಅವರು ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.ಇಂದು ಬೆಳಿಗ್ಗೆ ಕಡಿಯಾಳಿಯಲ್ಲಿರುವ ತಮ್ಮ ಮಗಳ ಮನೆಯಲ್ಲಿ ನಿಧನರಾಗಿದ್ದು ಮೃತರು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಮಂಗಳೂರು ಡಿಡಿಪಿಐ ಕಚೇರಿಯಲ್ಲಿ ವಿಷಯ ಪರಿವೀಕ್ಷಣಾ ಅಧಿಕಾರಿಯಾಗಿದ್ದ ಐತಾಳರು, ಕನ್ನಡ ಪಂಡಿತರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಅನುಭವ ವುಳ್ಳವರು. ತಮ್ಮ ನಿವೃತ್ತಿ ಬಳಿಕ ಪತ್ರಿಕಾ ವರದಿಗಾರನಾಗಿ, ಉಡುಪಿ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.
- Advertisement -