Saturday, June 6, 2026
Homeತಾಜಾ ಸುದ್ದಿರಾಜ್ಯದಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ-ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭ

ರಾಜ್ಯದಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ-ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭ

- Advertisement -
- Advertisement -

ಬೆಂಗಳೂರು:ಈಗಾಗಲೇ ಘೋಷಣೆಯಾಗಿರುವ ರಾಜ್ಯದಲ್ಲಿನ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಇಂದು ಅಧಿಸೂಚನೆ ಹೊರ ಬೀಳಲಿದೆ. ಅಭ್ಯರ್ಥಿಗಳು ಇಂದಿನಿಂದ ನಾಮಪತ್ರ ಸಲ್ಲಿಸಬಹುದು. ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭವಾದರೆ ಡಿಸೆಂಬರ್ 11 ನಾಮಪತ್ರಸಲ್ಲಿಸಲು ಕೊನೆಯ ದಿನವಾಗಲಿದೆ.ಅಲ್ಲದೆ ಡಿಸೆಂಬರ್ ೧೪ರೊಳಗಾಗಿ ನಾಮಪತ್ರ ವಾಪಸ್ ಪಡೆಯಬಹುದು.

117 ತಾಲೂಕುಗಳ ಡಿಸೆಂಬರ್ 22 ರಂದು 3021 ಗ್ರಾಮ ಪಂಚಾಯಿತಿಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.ಮೊದಲ ಹಂತದಲ್ಲಿ ಡಿಸೆಂಬರ್ 22 ರಂದು ಬೆಳಿಗ್ಗೆ 7 ಗಂಟೆಯಿಂದ ಮತದಾನ ನಡೆಯಲಿದೆ. ಹಾಗೂ ಎರಡನೆ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಡಿಸೆಂಬರ್ 11 ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಮಾಹಿತಿ ಹೊರಬಿದ್ದಿದೆ.

- Advertisement -

Latest News

error: Content is protected !!