Monday, August 31, 2026
Homeತಾಜಾ ಸುದ್ದಿದಾಖಲೆಯ ಏರಿಕೆ ಕಂಡ ಕೊಬ್ಬರಿ ಬೆಲೆ!..

ದಾಖಲೆಯ ಏರಿಕೆ ಕಂಡ ಕೊಬ್ಬರಿ ಬೆಲೆ!..

- Advertisement -
- Advertisement -

ಬೆಂಗಳೂರು:ದಿನನಿತ್ಯ ಬಳಕೆಯ ತರಕಾರಿ ಹಾಗೂ ಇತರ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಕೊಬ್ಬರಿ ಬೆಲೆ ದಿಢೀರ್ ಏರಿಕೆ ಕಂಡಿದ್ದು,ಕ್ವಿಂಟಾಲ್ ಗೆ 16 ಸಾವಿರ ರೂಪಾಯಿ ತಲುಪಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಲೆ ದಿಢೀರ್ ಏರಿಕೆ ಕಂಡಿದೆ ಎಂದು ಅಂದಾಜಿಸಲಾಗಿದೆ.

ಈ ಹಿಂದೆ ಕ್ವಿಂಟಾಲ್ ಗೆ 13 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದ್ದ ಕೊಬ್ಬರಿ ದರ 16 ಸಾವಿರ ರೂಪಾಯಿಗೆ ತಲುಪಿದೆ. ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಇತ್ತೀಚೆಗೆ ಕಡಿಮೆಯಾಗಿತ್ತು. ಮಾರ್ಚ್ ನಿಂದ ಜೂನ್ ವರೆಗೆ ಒಂದು ಕ್ವಿಂಟಾಲ್ ಗೆ 10 ಸಾವಿರ ರೂಪಾಯಿಯವರೆಗೆ ಮಾರಾಟವಿದ್ದು ದೀಪಾವಳಿ ನಂತರ ಈಗ ದಿಢೀರ್ ಏರಿಕೆ ಕಂಡಿದೆ.

- Advertisement -

Latest News

error: Content is protected !!