Wednesday, June 3, 2026
Homeಕರಾವಳಿಮಂಗಳೂರು30 ಅಡಿ ಆಳದ ಬಾವಿಗೆ ಇಳಿದು ಬೆಕ್ಕನ್ನು ರಕ್ಷಿಸಿದ ಮಂಗಳೂರಿನ ಮಹಿಳೆ:ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

30 ಅಡಿ ಆಳದ ಬಾವಿಗೆ ಇಳಿದು ಬೆಕ್ಕನ್ನು ರಕ್ಷಿಸಿದ ಮಂಗಳೂರಿನ ಮಹಿಳೆ:ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

- Advertisement -
- Advertisement -

ಮಂಗಳೂರು: ಇವತ್ತು ಮನುಷ್ಯ ಅಪಾಯದಲ್ಲಿ ಸಿಲುಕಿದ್ರೆ ಅವರ ರಕ್ಷಣೆಗೆ ಬರೋದಕ್ಕೆ ಜನ ಹಿಂದೆ ಮುಂದೆ ನೋಡ್ತಾರೆ. ಅಂತಹದ್ರಲ್ಲಿ ಪ್ರಾಣಿಗಳು ಪಕ್ಷಿಗಳು ಕಷ್ಟದಲ್ಲಿದೆ ಅಂದ್ರೆ ಅವುಗಳಿಗೆ ನೆರವಾಗುವವರು ಎಷ್ಟು ಮಂದಿ ಇರ್ತಾರೆ ಹೇಳಿ. ಅಂತಹದ್ರಲ್ಲಿ ಮಂಗಳೂರಿನ ಮಹಿಳೆಯೊಬ್ಬರು ಬೆಕ್ಕೊಂದನ್ನು ರಕ್ಷಣೆ ಮಾಡೋದಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡ್ಡಿದ್ದಾರೆ.

ಮಂಗಳೂರಿನ ಕೊಂಚಾಡಿ ದೇರೆಬೈಲಿನಲ್ಲಿ ಬೆಕ್ಕೊಂದು ಬಾವಿಗೆ ಬಿದ್ದಿತ್ತು. ಕೂಡಲೇ ವಿಚಾರ ತಿಳಿದ ಪ್ರಾಣಿ ಪ್ರೇಮಿ ರಜನಿ ಶೆಟ್ಟಿ ಅವರು ಹಗ್ಗದ ಸಹಾಯದಿಂದ 30 ಅಡಿ ಆಳದ ಬಾವಿಗೆ ಇಳಿದಿದ್ದಾರೆ. ಅಲ್ಲದೇ ಬೆಕ್ಕನ್ನು ರಕ್ಷಣೆ ಮಾಡಿದ್ದಾರೆ. ಈ ಹಿಂದೆಯೂ ರಜನಿ ಶೆಟ್ಟಿ ಅವರು ಬಾವಿಗೆ ಬಿದ್ದ ಅನೇಕ ಪ್ರಾಣಿಗಳನ್ನು ಇದೇ ರೀತಿ ರಕ್ಷಿಸಿದ್ದಾರೆ.

ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಹೊಂದಿರುವ ರಜನಿ ಶೆಟ್ಟಿ ಪ್ರತಿ ದಿನ ಬೀದಿ ನಾಯಿಗಳಿಗೆ ಊಟ ಹಾಕುವ ಮೂಲಕ ತಮ್ಮ ಹೃದಯ ವೈಶಾಲ್ಯತೆಯನ್ನು ಮೆರೆಯುತ್ತಿದ್ದಾರೆ. ಇದೀಗ ಅವರು ಬೆಕ್ಕಿನ ರಕ್ಷಣೆ ಮಾಡಿರೋದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೇ ಅವರ ಧೈರ್ಯಕ್ಕೆ ಭೇಷ್ ಅನ್ನುತ್ತಿದ್ದಾರೆ ಜನ. ಅಲ್ಲದೇ ಅವರು ಬೆಕ್ಕನ್ನು ರಕ್ಷಣೆ ಮಾಡುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

- Advertisement -

Latest News

error: Content is protected !!