Saturday, June 6, 2026
Homeತಾಜಾ ಸುದ್ದಿ14 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ ಪಾಪಿ- ಡ್ರಾಪ್​ ನೆಪದಲ್ಲಿ ಯುವತಿಯ ಕಿಡ್ನ್ಯಾಪ್!..

14 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ ಪಾಪಿ- ಡ್ರಾಪ್​ ನೆಪದಲ್ಲಿ ಯುವತಿಯ ಕಿಡ್ನ್ಯಾಪ್!..

- Advertisement -
- Advertisement -

ಜೈಪುರ: ಇಲ್ಲಿನ ರಾಜಸ್ಥಾನದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿದ್ದು ಪ್ರಕರಣ ಪೊಲೀಸ್ ಠಾಣಾ ಮೆಟ್ಟಿಲೇರಿದೆ. ಅಪರಿಚಿತ ನೋರ್ವ ಡ್ರಾಪ್​ ಕೊಡುತ್ತೇನೆಂದು ಹೇಳಿ ಆಕೆ ಒಪ್ಪದಿದ್ದರೂ ತಾನೇ ಆಕೆಯನ್ನು ಎಳೆದು ಬೈಕ್ ನಲ್ಲಿ ಕೂರಿಸಿಕೊಂಡು ಹೋಗಿದ್ದಾನೆ. 20 ವರ್ಷದ ಯುವತಿಯು ತನ್ನ ಸಂಬಂಧಿಯ ಮದುವೆಗೆ ಹೋಗುವಾಗ ಘಟನೆ ನಡೆದಿದೆ.

ಯುವತಿಯನ್ನು ಬೈಕ್​ನಲ್ಲೇ ಅಪಹರಣ ಮಾಡಿದ ಯುವಕ, ಆಕೆಯನ್ನು ಕಾಡೊಂದರೊಳಗಿದ್ದ ಗುಡಿಸಲಿಗೆ ಕರೆದೊಯ್ದು ಹಗ್ಗದಿಂದ ಕಟ್ಟಿ ಹಾಕಿ ಸತತ 14 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. 14 ದಿನಗಳ ನಂತರ ಯುವತಿ ಕಷ್ಟ ಪಟ್ಟು ಹಗ್ಗವನ್ನು ಬಿಡಿಸಿತಂದೆಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಪೊಲೀಸರು ಯುವತಿಯನ್ನು ರಕ್ಷಿಸಿದ್ದು ಅಪರಾಧಿಯನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!