Wednesday, June 3, 2026
Homeತಾಜಾ ಸುದ್ದಿಹೇಳದೇ ಎರಡನೇ ಮದುವೆಯಾದ್ರಾ ಡಾನ್ಸಿಂಗ್ ಸ್ಟಾರ್, ನಟ ಪ್ರಭುದೇವ್?

ಹೇಳದೇ ಎರಡನೇ ಮದುವೆಯಾದ್ರಾ ಡಾನ್ಸಿಂಗ್ ಸ್ಟಾರ್, ನಟ ಪ್ರಭುದೇವ್?

- Advertisement -
- Advertisement -

ಮುಂಬೈ: ನಟ ಪ್ರಭುದೇವ್ ಅವರ ವೈಯುಕ್ತಿಕ ಜೀವನ ಆಗಾಗ್ಗೆ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಯಾಗುತ್ತಲೇ ಇರೋದು ನಿಮಗೆಲ್ಲಾ ಗೊತ್ತೇ ಇದೆ. ಈ ಹಿಂದೆ ಪ್ರಭುದೇವ್ ಹಾಗೂ ನಟಿ ನಯನತಾರಾ ವಿವಾಹ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅವರಿಬ್ಬರು ಇನ್ನು ಮದುವೆಯಾಗುತ್ತಾರೆ ಅನ್ನುವಷ್ಟರಲ್ಲಿ ಪರಸ್ಪರ ದೂರವಾದ್ರು. ಇದೀಗ ಪ್ರಭುದೇವ್ ಮದುವೆ ಬಗ್ಗೆ ಮತ್ತೆ ಸುದ್ದಿ ಹರಿದಾಡುತ್ತಿದೆ.

ಇದೀಗ ಡಾನ್ಸಿಂಗ್ ಸ್ಟಾರ್, ನಟ, ನಿರ್ದೇಶಕ ಪ್ರಭುದೇವ ಮತ್ತೊಂದು ವಿವಾಹವಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡಿದೆ. ಪ್ರಭುದೇವ ಸೆಪ್ಟೆಂಬರ್ ನಲ್ಲೇ ಫಿಜಿಯೋಥೆರಪಿಸ್ಟ್ ಒಬ್ಬರನ್ನು ವಿವಾಹವಾಗಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.

ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಭುದೇವ ಚಿಕಿತ್ಸೆಗೆಂದು ಬಿಹಾರ ಮೂಲದ ಫಿಜಿಯೋಥೆರಪಿಸ್ಟ್ ಬಳಿ ಹೋಗಿದ್ದು, ಈ ವೇಳೆ ಇಬ್ಬರಿಗೂ ಪ್ರೇಮಾಂಕುರವಾಗಿದೆ. ಸೆಪ್ಟೆಂಬರ್ ನಲ್ಲಿ ಪ್ರಭುದೇವ ಫಿಜಿಯೋಥೆರಪಿಸ್ಟ್ ಜೊತೆ ವಿವಾಹವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಪ್ರಭುದೇವ ಹಾಗೂ ಅವರ ಪತ್ನಿ ಚೆನ್ನೈನ ನಿವಾಸದಲ್ಲಿ ವಾಸವಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಪ್ರಭುದೇವ ತಮ್ಮ ಎರಡನೇ ಮದುವೆ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.

- Advertisement -

Latest News

error: Content is protected !!