Friday, June 5, 2026
Homeತಾಜಾ ಸುದ್ದಿಮಾಸ್ಕ್‌ ಧರಿಸದೆ ದಂಡ ಕಟ್ಟಿದರು- ದಂಡದ ವೇಳೆ ಬಯಲಾಯ್ತು ನಕಲಿ ನೋಟು ಮಾರಾಟ ಜಾಲ!..

ಮಾಸ್ಕ್‌ ಧರಿಸದೆ ದಂಡ ಕಟ್ಟಿದರು- ದಂಡದ ವೇಳೆ ಬಯಲಾಯ್ತು ನಕಲಿ ನೋಟು ಮಾರಾಟ ಜಾಲ!..

- Advertisement -
- Advertisement -

ಬೆಂಗಳೂರು: ಇಲ್ಲಿನ ಮೈಕೋ ಲೇಔಟ್‌ ಪೊಲೀಸರು ಇಂದು ನಕಲಿ ನೋಟು ಮಾರಾಟ ಮಾಡುವ ಜಾಲವೊಂದನ್ನು ಪತ್ತೆ ಮಾಡಿದ್ದಾರೆ. ಮಾಸ್ಕ್‌ ಧರಿಸದ ಮೂವರಿಗೆ ದಂಡ ವಿಧಿಸುವಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ ಎರಡು ಸಾವಿರ ಮುಖ ಬೆಲೆಯ 7.75 ಲಕ್ಷ ರೂ. ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳು ತಮಿಳುನಾಡಿನವರಾಗಿದ್ದು, ಸುಮನ್‌, ದೇವರಾಜನ್‌, ಮುನಿಶೇಖರ್‌ ಎಂದು ಗುರುತಿಸಲಾಗಿದೆ. ಇವರು ಕಾರಿನಲ್ಲಿ ಬರುತ್ತಿದ್ದ ವೇಳೆ ಮೈಕೋ ಲೇಔಟ್‌ ಸಮೀಪ ಬಂದಾಗ ಪೊಲೀಸರು ಮಾಸ್ಕ್‌ ಹಾಕದವರಿಗೆ ದಂಡ ವಿಧಿಸುತ್ತಿದ್ದರು. ಪೊಲೀಸರನ್ನು ನೋಡಿ ಸಂಶಯ ರೀತಿಯಲ್ಲಿ ನಡೆದುಕೊಂಡ ಕಾರಣ ಪ್ರಕರಣ ಬೆಳಕಿಗೆ ಬಂದಿದೆ.

ಮಾಸ್ಕ್‌ ಹಾಕದ ಬಗ್ಗೆ ಪೊಲೀಸರು ವಿಚಾರಣೆ ನಡೆಸುವಾಗ ಎರಡು ಸಾವಿರ ಮುಖ ಬೆಲೆಯ ಖೋಟಾ ನೋಟುಗಳನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ವಿಚಾರಣೆ ನಡೆಸಿದಾಗ ಎರಡು ಸಾವಿರ ಮುಖ ಬೆಲೆಯ ನೋಟುಗಳನ್ನು ಜೆರಾಕ್ಸ್ ಮಾಡಿದ್ದು, ಅವನ್ನು ಚಲಾವಣೆ ಮಾಡಲು ಮುಂದಾಗಿರುವುದು ಗೊತ್ತಾಗಿದೆ. ಮೂವರು ಆರೋಪಿಗಳನ್ನು ಮೈಕೋ ಲೇಔಟ್‌ ಪೊಲೀಸರು ಬಂಧಿಸಿದ್ದು, ಆರೋಪಿಗಳ ಬಳಿಯಿದ್ದ ಏಳು ಲಕ್ಷ, ಎಪ್ಪತ್ತೈದು ಸಾವಿರ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಕೋ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!