- Advertisement -
- Advertisement -
ಬೀಜಿಂಗ್: ಚೀನಾದ ಬೀದಿಯಲ್ಲಿ ಹುಲಿಯೊಂದನ್ನು ಮಾಲೀಕನೊಬ್ಬ ಕೆರೆದೊಯ್ಯುವಾಗ ಜನ ಮಿಶ್ರ ಪ್ರತಿಕ್ರಿಯೆ ನೀಡಿದರು. ಕೆಲವ್ರು ಎದ್ದು ಬಿದ್ದು ಓಡಿದರೆ ಮತ್ತೆ ಕೆಲವರು ನಕ್ಕು ಸುಸ್ತಾದರು. ಕಾರಣ ಈ ಮಾಲೀಕ ತನ್ನ ಶ್ವಾನಕ್ಕೆ ಕಿತ್ತಳೆ ಹಾಗೂ ಬಿಳಿಯ ಬಣ್ಣವನ್ನು ಬಳಿದು ಥೇಟ್ ಹುಲಿಯಂತೆ ರೂಪ ನೀಡಿ ಚೀನಾದ ಬೀದಿಯಲ್ಲಿ ಕರೆದೊಯ್ದಿದ್ದ.
ಹುಲಿಯ ರೂಪದಲ್ಲಿದ್ದ ಶ್ವಾನ ಕಕೇಶಿಯನ್ ಶೆಫರ್ಡ್ ತಳಿಯದ್ದು. ಸಧ್ಯ ಈ ವಾಕ್ ವಿಡಿಯೋ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ವಿಡಿಯೋ ಭಾರಿ ವೈರಲ್ ಆಗಿದ್ದು, ಟ್ರೆಂಡಿಂಗ್ನಲ್ಲಿದೆ.ನಾಯಿಯ ಉದ್ದನೆಯ ಕೂದಲಿಗೆ ಬಣ್ಣ ಹಚ್ಚಿ, ನಕಲಿ ಬಾಲವನ್ನು ಅಂಟಿಸಿ, ಮಾಲೀಕನೊಬ್ಬ ಶ್ವಾನಕ್ಕೆ ಹುಲಿಯ ರೂಪವನ್ನು ಕೊಡಲಾಗಿದೆ.
- Advertisement -