Thursday, June 4, 2026
Homeತಾಜಾ ಸುದ್ದಿಅಡುಗೆ ವಿಚಾರಕ್ಕೆ ತಾಯಿ ಮಗಳ ಕಿತ್ತಾಟ: ಜಗಳ ನೋಡಿ ಸುಸ್ತಾದ ಮಗ ಕೊನೆಗೆ ಮಾಡಿದ್ದೇನು ಗೊತ್ತಾ?

ಅಡುಗೆ ವಿಚಾರಕ್ಕೆ ತಾಯಿ ಮಗಳ ಕಿತ್ತಾಟ: ಜಗಳ ನೋಡಿ ಸುಸ್ತಾದ ಮಗ ಕೊನೆಗೆ ಮಾಡಿದ್ದೇನು ಗೊತ್ತಾ?

- Advertisement -
- Advertisement -

ಗುಜರಾತ್ : ಅಡುಗೆ ವಿಚಾರದಲ್ಲಿ ತಾಯಿ-ಮಗಳ ನಡುವೆ ಜಗಳವಾಗಿದ್ದು, ಇದನ್ನು ನೋಡಿ ಸಿಟ್ಟಿಗೆದ್ದ ಮಗ ಇಬ್ಬರನ್ನು ಕೊಲೆ ಮಾಡಿದ್ದಾನೆ. ಗುಜರಾತ್​ನ ರಾಜ್​ಕೋಟ್​ನಲ್ಲಿ ಈ ಘಟನೆ ನಡೆದಿದೆ. ಅಮ್ಮ ಮತ್ತು ತಂಗಿಯನ್ನು ಕೊಂದ ದೇವಾಶಿ ಭಾಟಿಯಾ ಪೊಲೀಸರ ಅತಿಥಿಯಾಗಿದ್ದಾನೆ.

ಅಮ್ಮ ಕಸ್ತೂರಾ ಭಾಟಿಯಾ ಮತ್ತು ತಂಗಿ ಸಂಗೀತಾ ಭಾಟಿಯಾ ನಡುವೆ ಅಡುವೆ ಮಾಡುವ ವಿಚಾರದಲ್ಲಿ ಜಗಳವಾಗಿದೆ. ಶನಿವಾರ ಬೆಳಗ್ಗಿನಿಂದಲೇ ನೀನು ಇಂದು ಅಡುಗೆ ಮಾಡು.. ಎಂದು ಜಗಳವಾಡಿದ್ದಾರೆ. ತಾಯಿ ಕಸ್ತೂರಾ ಭಾಟಿಯಾ ಮಗಳ ಬಳಿ ನೀನು ಅಡುಗೆ ಮಾಡು ಎಂದಿದ್ದಾರೆ. ಅದಕ್ಕೆ ಮಗಳು ಸಂಗೀತಾ ಅಡುಗೆ ಮಾಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾಳೆ. ಇವರಿಬ್ಬರ ಜಗಳದಿಂದ ಬೇಸತ್ತುಹೋದ ದೇವಾಶಿ ಭಾಟಿಯಾ ನಾನು ಕೃಷಿ ಕೆಲಸದಿಂದ ಬರುವುದರೊಳಗೆ ಅಡುಗೆ ಮಾಡಿ ಇಟ್ಟಿರಿ ಎಂದು ಹೇಳಿ ಹೊರ ಹೋಗಿದ್ದಾನೆ. ಸಂಜೆ ವೇಳೆ ಕೆಲಸ ಮುಗಿಸಿಕೊಂಡು ಬಂದ ದೇವಾಶಿಗೆ ಮನೆಯಲ್ಲಿ ಅಡುಗೆ ಮಾಡಿಲ್ಲವೆಂದು ಗೊತ್ತಾಗಿದೆ. ಹಸಿದು ದನಿದಿದ್ದ ದೇವಾಶಿಗೆ ಅಮ್ಮ-ಮಗಳ ಜಗಳದಿಂದ ಸಿಟ್ಟುಬಂದಿದೆ. ನಂತರ ಇಬ್ಬರಿಗೂ ಸರಿಯಾಗಿ ಹೊಡೆದಿದ್ದಾನೆ. ಅದರ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ.

ತಾಯಿ ಮತ್ತು ತಂಗಿ ಸಾವನ್ನಪಪಿದ್ದಾರೆ ಎಂದು ತಿಳಿದು ಭಯಗೊಂಡ ದೇವಾಶಿ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾನೆ. ಪೊಲೀಸರಿಗೆ ಕರೆ ಮಾಡಿ ಹೇಳಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Latest News

error: Content is protected !!